Sunday, April 28, 2024
Homeಕರಾವಳಿಉಡುಪಿಉಡುಪಿ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ, 8 ಮೀನುಗಾರರ ರಕ್ಷಣೆ

ಉಡುಪಿ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ, 8 ಮೀನುಗಾರರ ರಕ್ಷಣೆ

spot_img
- Advertisement -
- Advertisement -

ಉಡುಪಿ: ಅರಬ್ಬಿ ಸಮುದ್ರದಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಮೀನುಗಾರಿಕಾ ಬೋಟ್ ಮುಳುಗಿದ ಘಟನೆ ಮಲ್ಪೆಯಲ್ಲಿ ನಡೆದಿದೆ.

ಘಟನೆಯಲ್ಲಿ ಮುಳುಗಲ್ಪಟ್ಟ ಬೋಟ್ ನಲ್ಲಿದ್ದ ಎಂಟು ಜನ
ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಉಡುಪಿ ತಾಲೂಕಿ‌ನ ಕಡೆಕಾರಿನ ರಕ್ಷಾ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ನ ಒಳಭಾಗಕ್ಕೆ ನೀರು ನುಗ್ಗಿದ ಪರಿಣಾಮ ಬೋಟ್ ಮುಳುಗಲ್ಪಟ್ಟಿದೆ.

ಬೋಟ್ ಮುಳುಗಲಾರಂಭಿಸಿದ ಕೂಡಲೇ ಮೀನುಗಾರರು ವಯರ್ ಲೆಸ್ ಮೂಲಕ ಸಹಾಯ ಕೋರಿದ್ದು, ಈ ವೇಳೆ ಮತ್ತೊಂದು ಬೋಟ್ ನಲ್ಲಿದ್ದ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಮೀನುಗಾರಿಕಾ ಬೋಟ್ ಮುಳುಗಿದ ಪರಿಣಾಮ ಸುಮಾರು 18 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!