Friday, June 5, 2026
Homeಕರಾವಳಿಉಡುಪಿಉಡುಪಿ: ಆಯತಪ್ಪಿ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ

ಉಡುಪಿ: ಆಯತಪ್ಪಿ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ

- Advertisement -
- Advertisement -

ಉಡುಪಿ: ಆಯತಪ್ಪಿ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆಯಾಗಿರುವ ಘಟನೆ ಮಲ್ಪೆ ಬಂದರಿನಲ್ಲಿ ಮಂಜಿ ಧಕ್ಕೆಯಲ್ಲಿ ನಡೆದಿದೆ.  ತಮಿಳುನಾಡು ಮೂಲದ ಗಣೇಶನ್ (51) ನಾಪತ್ತೆಯಾದ ಮೀನುಗಾರ.

ಗಣೇಶನ್ ಕಾಸರಗೋಡಿನ ಇಮ್ಯಾನುವೆಲ್ ಕಿರಣ್ ಎಂಬವರ ರಾಯಲ್ ಫಿಶರ್ ಬೋಟ್‌ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಮೀನುಗಾರರೆಲ್ಲಾ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಧಕ್ಕೆಯಲ್ಲಿ ತಯಾರಿ ನಡೆಸುತ್ತಿರುವಾಗ, ಗಣೇಶನ್ ಬೋಟಿನ ಹಿಂಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಹೋಗಿದ್ದರು. ಆಗ ಆಯತಪ್ಪಿ ಆಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!