Wednesday, May 1, 2024
Homeಉತ್ತರ ಕನ್ನಡಉತ್ತರಕನ್ನಡ; 43 ಗಂಟೆಗಳ ಸಮುದ್ರದಲ್ಲಿ ಈಜಿ ಬದುಕಿ ಬಂದ ಮೀನುಗಾರ

ಉತ್ತರಕನ್ನಡ; 43 ಗಂಟೆಗಳ ಸಮುದ್ರದಲ್ಲಿ ಈಜಿ ಬದುಕಿ ಬಂದ ಮೀನುಗಾರ

spot_img
- Advertisement -
- Advertisement -

ಉತ್ತರಕನ್ನಡ; ಆಕಸ್ಮಿಕವಾಗಿ ನೀರಿಗೆ ಬಿದ್ದ  ಮೀನುಗಾರನೊಬ್ಬ 43 ಗಂಟೆಗಳ ಸಮುದ್ರದಲ್ಲಿ ಈಜಿ ಕೊನೆಗೆ ಬದುಕಿ ಬಂದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ

ಭಾನುವಾರ ಬೀಸಿದ ಗಾಳಿ – ಮಳೆಯ ಅಬ್ಬರಕ್ಕೆ ಕೇರಳದ ಲಿಫ್ಟನ್‌ ಮೆರಿನ್‌ ಬೋಟ್‌ನಿಂದ ತಮಿಳುನಾಡು ಮೂಲದ 25 ವರ್ಷದ ಮೀನುಗಾರರೊಬ್ಬರು ಆಯ ತಪ್ಪಿ ಸಮುದ್ರಕ್ಕೆ ಬಿದ್ದಿದ್ದರು.

ಧೈರ್ಯ ಕಳೆದುಕೊಳ್ಳದ ಅವರು ಸುಮಾರು 43 ಗಂಟೆಗಳ ಕಾಲ ಈಜಾಡುತ್ತ ಕೈ ಮೇಲೆ ಮಾಡುತ್ತ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಕೊನೆಗೂ “ಸೀ ಸಾಗರ್‌’ ಬೋಟಿನ ಮೀನುಗಾರರ ಕಣ್ಣಿಗೆ ಬಿದ್ದರು.ಬೋಟ್‌ನಲ್ಲಿದ್ದ ಶ್ರೀಧರ ಖಾರ್ವಿ ಉಪ್ಪುಂದ ಮತ್ತು ಸಂಜೀವ ಖಾರ್ವಿ ಮರವಂತೆ ಅವರು ಕೂಡಲೇ ಅವರ ಕೈ ಹಿಡಿದು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.

ಸುಮಾರು 43 ಗಂಟೆ ಸಮುದ್ರದಲ್ಲಿ ಈಜಿ ಸುಸ್ತಾಗಿದ್ದ ಅವರನ್ನು ಮೀನುಗಾರರು ಉಪಚರಿಸಿ ಸಂಬಂಧಪಟ್ಟ ಬೋಟ್‌ ಮಾಲೀಕರಿಗೆ ಅವರನ್ನು ಹಸ್ತಾಂತರಿಸಿದ್ದಾರೆ.

- Advertisement -
spot_img

Latest News

error: Content is protected !!