Friday, June 5, 2026
Homeಕರಾವಳಿಉಡುಪಿನಾಳೆಯಿಂದ 2 ತಿಂಗಳು ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

ನಾಳೆಯಿಂದ 2 ತಿಂಗಳು ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

- Advertisement -
- Advertisement -

ಉಡುಪಿ: ಸರ್ಕಾರದ ಆದೇಶದಂತೆ ನಾಳೆಯಿಂದ ಮಳೆಗಾಲದ ಹಿನ್ನಲೆಯಲ್ಲಿ ಆಳಸಮುದ್ರ ಮೀನುಗಾರಿಕೆ ನಿಷೇದ ಹೇರಲಾಗಿದೆ. ಕರಾವಳಿಯಲ್ಲಿ ನಾಳೆಯಿಂದ ಮೀನುಗಾರಿಕೆ ನಿಷೇಧ ಅವಧಿ ಪ್ರಾರಂಭವಾಗಲಿದ್ದು ಯಾವುದೇ ಮೀನುಗಾರಿಕಾ ಬೋಟುಗಳೂ ಸಮುದ್ರಕ್ಕೆ ಇಳಿಯುವುದಿಲ್ಲ.

ಕೊರೋನಾ ಹಿನ್ನಲೆ ಜೂನ್ 15ರ ವರೆಗೆ ಸರ್ಕಾರ ಮೀನುಗಾರಿಕಾ ಅವಧಿಯನ್ನ ವಿಸ್ತರಣೆ ಮಾಡಿದ್ದು, ಇಂದು ಮೀನುಗಾರಿಕೆಗೆ ಕೊನೆಯ ದಿನವಾಗಿದೆ. ಜೂನ್, ಜುಲೈ ತಿಂಗಳ ಮಳೆಗಾಲದ ಅವಧಿಯಲ್ಲಿ ಎರಡು ತಿಂಗಳು ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವುದರಿಂದ ಯಾರೂ ಕೂಡಾ ಮೀನುಗಳನ್ನ ಹಿಡಿಯುವಂತಿಲ್ಲ.

- Advertisement -

Latest News

error: Content is protected !!