Sunday, May 19, 2024
Homeತಾಜಾ ಸುದ್ದಿಕೆನಡಾ ವಾಟರ್ ನೆಕ್ಸ್ಟ್ ಪ್ರಶಸ್ತಿ ಬಾಚಿಕೊಂಡ ಕನ್ನಡತಿ ಚಿತ್ರ ಗೌಡ

ಕೆನಡಾ ವಾಟರ್ ನೆಕ್ಸ್ಟ್ ಪ್ರಶಸ್ತಿ ಬಾಚಿಕೊಂಡ ಕನ್ನಡತಿ ಚಿತ್ರ ಗೌಡ

spot_img
- Advertisement -
- Advertisement -

ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ಕೆನಡಾ ವಾಟರ್ ಶೃಂಗಸಭೆಯು ಕೊಡಮಾಡುವ ವಾಟರ್ ನೆಕ್ಸ್ಟ್ 2020 ವಾರ್ಷಿಕ ಪ್ರಶಸ್ತಿಗೆ ಕನ್ನಡತಿ ಚಿತ್ರ ಗೌಡ ಆಯ್ಕೆಯಾಗಿದ್ದಾರೆ. ನೀರಿನ ಕಾರ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಯೋಜನೆಗಳ ಮೂಲಕ ಮಹತ್ವದ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ನೀಡುವ ಈ ಪ್ರಶಸ್ತಿ ಮೊಟ್ಟ ಮೊದಲ ಬಾರಿಗೆ ಕನ್ನಡಿಗರೊಬ್ಬರಿಗೆ ಸಂದಿರುವುದು ವಿಶೇಷವಾಗಿದೆ.

ಚಿತ್ರ ಗೌಡ , ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ ತಗಡೂರು ಗ್ರಾಮದ (ಪುರುದೇಗೌಡರ ಮನೆ) ಡಾ.ಹಾಲಪ್ಪಗೌಡ ಮತ್ತು ರತ್ನಮ್ಮ ಅವರ ಪುತ್ರಿ. ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಚಿತ್ರ, ಈ ಸಾಧನೆ ಗೌರವವನ್ನು ತಂದೆ ಹಾಲಪ್ಪಗೌಡ ಅವರಿಗೆ ಸಮರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.

ನೀರು ಸಂರಕ್ಷಣೆ, ಜಲಾಯನ ಮೇಲ್ವಿಚಾರಣೆ ಮತ್ತು ಯೋಜನೆ, ಹವಾಮಾನ ಬದಲಾವಣೆಯ ಮೌಲ್ಯಮಾಪನ, ನೀರಿನ ನೀತಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಸಂಬಂಧಿಸಿದಂತೆ ಕೆನಡಾದಲ್ಲಿ ಪ್ರಾಂತೀಯ ಸರ್ಕಾರ, ಪುರಸಭೆ ಮತ್ತು ಸಂಘ ಸಂಸ್ಥೆಗಳ ಜೊತೆಯಲ್ಲಿ ಸುಮಾರು 20 ವರ್ಷಗಳಿಂದ ಚಿತ್ರ ಕೆಲಸ ಮಾಡುತ್ತಿದ್ದಾರೆ.

- Advertisement -
spot_img

Latest News

error: Content is protected !!