Friday, June 5, 2026
Homeಕರಾವಳಿಉಡುಪಿಮೀನುಗಾರರ ಈ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ..

ಮೀನುಗಾರರ ಈ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ..

- Advertisement -
- Advertisement -

ಉಡುಪಿ ನಾವೆಲ್ಲಾ ಮೀನುಕೊಳ್ಳುವಾಗ ರೇಟ್ ಒಂಚೂರು ಜಾಸ್ತಿಯಾದ್ರೆ ಮನಸ್ಸಿನಲ್ಲೇ ಬೈದು ಕೊಳ್ತೇವೆ. ಮೀನು ಫ್ರೆಶ್ ಇಲ್ಲಾ ಅಂತಾ ಮನಸ್ಸಿನಲ್ಲಿ ಗೊಣಗುತ್ತೇವೆ. ಆದ್ರೆ ಇದೇ ಮೀನನ್ನು ಹಿಡಿಯೋದಕ್ಕೆ ಗ್ರಾಹಕರ ಬಾಯಿ ರುಚಿಸಿ ತಣಿಸೋದಕ್ಕೆ ಎಷ್ಟೆಲ್ಲಾ ಕಷ್ಟ ಪಡುತ್ತಾರೆ ಗೊತ್ತಾ.

ಮೀನು ಹಿಡಿಯೋದಕ್ಕೆ ದೋಣಿ ಹತ್ತಿ ಹೊರಟ್ರೆ ಆ ಮೀನುಗಾರರಿಗೆ ಒಬ್ಬರಿಗೂ ವಾಪಸ್ ಬರುತ್ತೇವೆ ಅನ್ನೋ ಭರವಸೆಯೇ ಇರೋದಿಲ್ಲ. ಆದರೂ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಮೀನುಗಾರಿಕೆಗೆ ಹೊರಡುತ್ತಾರೆ. ಮೀನುಗಾರರು ತೆಗೆದುಕೊಳ್ಳುವ ರಿಸ್ಕ್ ಹೇಗಿರುತ್ತೆ ಅನ್ನೋದನ್ನು ನೆಟ್ಟಿಗರೊಬ್ರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದ್ರೆ ಮೈ ನಡುಗುತ್ತೆ. ಮೀನುಗಾರರ ಆ ಧೈರ್ಯಕ್ಕೆ, ಕಾಯಕ ಪ್ರೀತಿಗೆ ಹ್ಯಾಟ್ಸಾಫ್ ಹೇಳಲೇ ಬೇಕು..

ನಾವು ತಿನ್ನುವ ಮೀನಿನ ಹಿಂದೆ ಇಂತಹ ನೂರಾರು ದುರಂತಗಳಿವೆ. ಕುಟುಂಬ ನಿರ್ವಹಣೆಗಾಗಿ ಕಡಲಿಗಿಳಿದ ಮೀನುಗಾರ ಮರಳಿ ಮನೆಗೆ ಬರುವ ಯಾವ ಗ್ಯಾರಂಟಿಯೂ ಇಲ್ಲ. ಹಾಗೆ ನೀಲಿ ಕಡಲು ನುಂಗಿಕೊಂಡ ಯಾವ ಮೀನುಗಾರನ ಕೂಗು ಅಲೆಯ ಸದ್ದನ್ನು ದಾಟಿ ಬೆಂಗಳೂರಿನಲ್ಲಷ್ಟೇ ಮನುಷ್ಯರಿರುವುದು ಎಂದು ನಂಬಿರುವ ಮಾಧ್ಯಮಗಳನ್ನು ತಲುಪುವುದಿಲ್ಲ.

Posted by Bhaskar Bangera on Friday, 3 July 2020

- Advertisement -

Latest News

error: Content is protected !!