Thursday, July 16, 2026
Homeಕರಾವಳಿಉಳ್ಳಾಲ : ತಪ್ಪಿಸಲೆತ್ನಿಸಿದ ರೌಡಿಶೀಟರ್ ಗೆ ಪೊಲೀಸ್ ಫೈರಿಂಗ್: ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯ

ಉಳ್ಳಾಲ : ತಪ್ಪಿಸಲೆತ್ನಿಸಿದ ರೌಡಿಶೀಟರ್ ಗೆ ಪೊಲೀಸ್ ಫೈರಿಂಗ್: ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯ

- Advertisement -
- Advertisement -

ಉಳ್ಳಾಲ :ಪ್ರಕರಣವೊಂದರ ಮಹಜರಿಗೆ ತೆರಳುವ ವೇಳೆ ಪೊಲೀಸರ ಕೈಯಿಂದ ತಪ್ಪಿಸಲು ಯತ್ನಿಸಿದ ರೌಡಿಶೀಟರ್ ಓರ್ವನಿಗೆ ಪೊಲೀಸ್ ಫೈರಿಂಗ್ ನಡೆದಿರುವ ಘಟನೆ ಕೊಣಾಜೆ‌ ಪೊಲೀಸ್ ಠಾಣಾ ವ್ಯಾಪ್ತಿಯ ಅಸೈಗೋಳಿಯಲ್ಲಿ ನಡೆದಿದೆ.

ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 14 ಕ್ಕೂ ಅಧಿಕ ಪ್ರಕರಣ ಇರುವ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್ ನಡೆದಿದೆ. ಉಳ್ಳಾಲ ಠಾಣಾ ಪೊಲೀಸ್ ಸಿಬ್ಬಂದಿ ವಾಸುದೇವ ಹಾಗೂ ಅಕ್ಬರ್ ಎಂಬವರಿಗೆ ಗಾಯಗಳಾಗಿವೆ.  ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮುಕ್ತಾರ್ ನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ನಿನ್ನೆ  ಸೆರೆಹಿಡಿದಿದ್ದ ಉಳ್ಳಾಲ ಪೊಲೀಸರು, ಇಂದು ನಸುಕಿನ ಜಾವ ಬೈಕಿನ ಮಹಜರಿಗೆ ಕೊಣಾಜೆ ಬಳಿಯ ಅಸೈಗೋಳಿಗೆ ಕರೆದೊಯ್ದಿದ್ದರು. ಈ ವೇಳೆ ಪೊಲೀಸರ ಕೈಯಿಂದ ತಪ್ಪಿಸಲು ಯತ್ನಿಸಿದ್ದು, ಠಾಣಾಧಿಕಾರಿ  ಸಂದೀಪ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಕಾಲಿಗೆ ಗುಂಡು ಹೊಡೆದಿದ್ದಾರೆ. ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಕೊಣಾಜೆ ಪೊಲೀಸ್ ಠಾಣಾ
ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!