Thursday, June 4, 2026
Homeತಾಜಾ ಸುದ್ದಿಆಕಸ್ಮಿಕವಾಗಿ ಮನೆಗೆ ಬೆಂಕಿ : ಒಂದೇ ಕುಟುಂಬದ ಐವರು ಸಜೀವ ದಹನ

ಆಕಸ್ಮಿಕವಾಗಿ ಮನೆಗೆ ಬೆಂಕಿ : ಒಂದೇ ಕುಟುಂಬದ ಐವರು ಸಜೀವ ದಹನ

- Advertisement -
- Advertisement -

ತಮಿಳುನಾಡು : ಸೇಲಂ : ಆಕಸ್ಮಿಕವಾಗಿ ಮನೆಗೆ ಬೆಂಕಿ ಬಿದ್ದು ಹೊತ್ತಿ ಉರಿದ ಪರಿಣಾಮ ಒಂದೇ ಕುಟುಂಬದ ಐವರು ಸಜೀವ ದಹನವಾದ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯ ನರಸೋಧಿಪಟ್ಟಿಯ ರಾಮಸಾಮಿ ನಗರದಲ್ಲಿ ನಡೆದಿದೆ.

ಕಾರ್ತಿ (40), ಮಹೇಶ್ವರಿ (35), ಪುತ್ರರಾದ ಶರ್ವೇಶ್ (12), ಮುಖೇಶ್ (10) ಮತ್ತು ಅನ್ಬಲಗನ್ ಅವರ ಪತ್ನಿ ಪುಷ್ಪಾ (40) ಸಜೀವ ದಹನವಾಗಿದ್ದಾರೆ.

ಗುರುವಾರ ರಾತ್ರಿ ಮನೆಯೊಳಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಈ ವೇಳೆ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದು ಮನೆಯೊಳಗಿದ್ದವರನ್ನು ರಕ್ಷಿಸಲು ಪ್ರಯತ್ನಪಟ್ಟರೂ, ಸಾಧ್ಯವಾಗಿಲ್ಲ.

- Advertisement -

Latest News

error: Content is protected !!