Friday, June 5, 2026
Homeಕರಾವಳಿಉಡುಪಿಮಣಿಪಾಲದಲ್ಲಿ ಹೋಟೆಲ್ ಹಾಗೂ ಫರ್ನಿಚರ್ ಮಳಿಗೆಯಲ್ಲಿ ಅಗ್ನಿ ಅನಾಹುತ

ಮಣಿಪಾಲದಲ್ಲಿ ಹೋಟೆಲ್ ಹಾಗೂ ಫರ್ನಿಚರ್ ಮಳಿಗೆಯಲ್ಲಿ ಅಗ್ನಿ ಅನಾಹುತ

- Advertisement -
- Advertisement -

ಉಡುಪಿ:ಮಣಿಪಾಲದ ಲಕ್ಷ್ಮೀಂದ್ರನಗರ ಬಳಿ ಇರುವ ಸುಧಾ ಫರ್ನಿಚರ್ಸ್ ನಲ್ಲಿ ಅನಾಹುತ ಸಂಭವಿಸಿದ್ದು, ಫರ್ನಿಚರ್ ಅಂಗಡಿಯ ಜೊತೆಗೆ ಹೋಟೆಲ್ ಗೆ ಕೂಡ ಬೆಂಕಿ ತಗುಲಿದೆ. ಮುಂಜಾನೆ ನಾಲ್ಕು ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಅಪಾರ ಪ್ರಮಾಣದಲ್ಲಿ ಫರ್ನಿಚರ್ಸ್ ಮತ್ತು ಕಚ್ಚಾ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!