Friday, June 5, 2026
Homeಕರಾವಳಿಕಾರ್ಕಳದ ಕುಕ್ಕುಂದೂರಿನ ಗೇರುಬೀಜ ಕಾರ್ಖಾನೆಯಲ್ಲಿ ಅಗ್ನಿ ದುರಂತ, ಫ್ಯಾಕ್ಟರಿ ಅಗ್ನಿಗಾಹುತಿ

ಕಾರ್ಕಳದ ಕುಕ್ಕುಂದೂರಿನ ಗೇರುಬೀಜ ಕಾರ್ಖಾನೆಯಲ್ಲಿ ಅಗ್ನಿ ದುರಂತ, ಫ್ಯಾಕ್ಟರಿ ಅಗ್ನಿಗಾಹುತಿ

- Advertisement -
- Advertisement -

ಕಾರ್ಕಳ: ಇಲ್ಲಿಗೆ ಸಮೀಪದ ಕುಕ್ಕುಂದೂರಿನ ಮಾರುತಿ ಇಂಡಸ್ಟ್ರೀಸ್ ಗೇರು ಬೀಜದ ಫ್ಯಾಕ್ಟರಿಯಲ್ಲಿ ಮಂಗಳವಾರ ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಎರಡು ಲಾರಿ ಸಹಿತ ಕಾರ್ಖಾನೆ ಸಂಪೂರ್ಣ ಭಸ್ಮವಾಗಿದೆ.

ನಸುಕಿನ ಜಾವ 12.30 ರ ವೇಳೆಗೆ ಪಕ್ಕದಲ್ಲಿ ಮಲಗಿದ್ದ ಕೆಲಸಗಾರರಿಗೆ ಬೆಂಕಿ ತಗುಲಿದ ವಿಚಾರ ಗಮನಕ್ಕೆ ಬಂದ ಕೂಡಲೇ ಮಾಲಕರಿಗೆ ಮಾಹಿತಿ ನೀಡಿ ಅಗ್ನಿ ಶಾಮಕ ದಳದವರನ್ನು ಕರೆಸಲಾಗಿತ್ತು.

ಗೇರು ಬೀಜದ ಸಿಪ್ಪೆ ಮತ್ತು ಎಣ್ಣೆ ಇರುವುದರಿಂದ ಬೆಂಕಿಯ ಕೆನ್ನಾಲಿಗೆ ಫ್ಯಾಕ್ಟರಿಗೆ ಸಂಪೂರ್ಣವಾಗಿ ಹರಡಿದೆ.ಮೂರು ಅಗ್ನಿ ಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸುತ್ತಿದ್ದು, ಇಲ್ಲಿ ತನಕವೂ ಪೂರ್ಣ ನಂದಿಸಲು ಸಾಧ್ಯವಾಗಿಲ್ಲ. ಘಟನೆಯಲ್ಲಿ ಸುಮಾರು 1.5 ಕೋಟಿ ರೂ ನಷ್ಟವಾಗಿದೆ ಎಂದು ಮಾಲಕ ಪ್ರಕಾಶ್ ತಿಳಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದೆ.

- Advertisement -

Latest News

error: Content is protected !!