Sunday, June 7, 2026
Homeಮನರಂಜನೆಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ ಚಂದನ್ ಶೆಟ್ಟಿ, ಕಾಂಟ್ರವರ್ಸಿಯಾಗುತ್ತಿದ್ದಂತೆ ಕ್ಷಮೆ ಯಾಚನೆ

ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ ಚಂದನ್ ಶೆಟ್ಟಿ, ಕಾಂಟ್ರವರ್ಸಿಯಾಗುತ್ತಿದ್ದಂತೆ ಕ್ಷಮೆ ಯಾಚನೆ

- Advertisement -
- Advertisement -

ಬೆಂಗಳೂರು : ಕಳೆದ ಮೈಸೂರು ದಸರಾ ಸಂದರ್ಭದಲ್ಲಿ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿ ವಿವಾದಕ್ಕೆ ಸಿಲುಕಿದ್ದಂತಹ ಚಂದನ್ ಶೆಟ್ಟಿ ಇದೀಗ ಮತ್ತೆ ಕಾಂಟ್ರವರ್ಸಿಗೆ ಕಾರಣವಾಗಿದ್ದಾರೆ.

https://youtu.be/Lm3OOsqTlKs

ಅಂದ್ಹಾಗೆ ಈ ಬಾರಿ ಚಂದನ್ ಶೆಟ್ಟಿ ಅವರು ವಿವಾದಕ್ಕೆ ಕಾರಣವಾಗಿರೋದು ಅವರ ಆಲ್ಬಂ ಸಾಂಗ್ ನ ಮೂಲಕ. ಮೊನ್ನೆಯಷ್ಟೇ ಚಂದನ್ ಶೆಟ್ಟಿ ಅವರ ಕೋಲುಮಂಡೆ ಆಲ್ಬಂ ಸಾಂಗ್ ಬಿಡುಗಡೆಗೊಂಡಿತ್ತು. ಈ ಹಾಡು ಇದೀಗ ಮಲೆ ಮಹದೇಶ್ವರನ ಕೆಂಗಣ್ಣಿಗೆ ಗುರಿಯಾಗಿದೆ.

ಅಷ್ಟಕ್ಕೂ  ಮಹದೇಶ್ವರನ ಭಕ್ತರ ಕೋಪಕ್ಕೆ ಕಾರಣ ಏನ್ ಗೊತ್ತಾ, ಈ ಆಲ್ಬಂನಲ್ಲಿ  ಮಾದಪ್ಪನ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆಯಂತೆ. ಹಾಗೇ ಸಂಕಮ್ಮ, ಮಾದಪ್ಪನನ್ನು ಕೆಟ್ಟದಾಗಿ ಚಿತ್ರೀಕರಣ ಮಾಡಿದ್ದಾರೆಂದು ಮಲೆ ಮಹದೇಶ್ವರ ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ.

ಜಾನಪದ ಹಾಡಿಗೆ ರ್ಯಾಂಪ್ ಸಾಂಗ್ ಟಚ್ ಕೊಡಲಾಗಿದೆ. ಸಂಕಮ್ಮನನ್ನು ಕೆಟ್ಟದಾಗಿ ತೋರಿಸಿದ್ದಾರೆ. ಹಾಗಾಗಿ ಚಂದನ್ ಶೆಟ್ಟಿ ತಂಡ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಇನ್ನು ವಿವಾದ ಉಂಟಾಗುತ್ತಿದ್ದಂತೆ ಚಂದನ್ ಕ್ಷಮೆ ಯಾಚಿ,ಸಿದ್ದಾರೆ. ಚಿತ್ರೀಕರಿಸಿರುವಂತೆ ಶರಣೆ ಸಂಕಮ್ಮನ ವಿಡಿಯೋ ದೃಶ್ಯಾವಳಿಯನ್ನು ತೆಗೆದು ಹಾಕುತ್ತೇವೆ. ನಾನು ಚಾಮರಾಜನಗರ, ಮೈಸೂರು ಸೇರಿದಂತೆ ಸಂಕಮ್ಮ, ಮಲೆಮಹದೇಶ್ವರ ಭಕ್ತರನ್ನು ಕ್ಷಮೆ ಯಾಚಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.

- Advertisement -

Latest News

error: Content is protected !!