Sunday, June 7, 2026
Homeತಾಜಾ ಸುದ್ದಿಕಡಬ: ಹುಲ್ಲು ಪ್ರದೇಶಕ್ಕೆ ಆಕಸ್ಮಿಕವಾಗಿ ತಗುಲಿದ ಬೆಂಕಿ; ಬೆಂಕಿ ನಂದಿಸುವಲ್ಲಿ ಪೊಲೀಸರು ಸಫಲ

ಕಡಬ: ಹುಲ್ಲು ಪ್ರದೇಶಕ್ಕೆ ಆಕಸ್ಮಿಕವಾಗಿ ತಗುಲಿದ ಬೆಂಕಿ; ಬೆಂಕಿ ನಂದಿಸುವಲ್ಲಿ ಪೊಲೀಸರು ಸಫಲ

- Advertisement -
- Advertisement -

ಕಡಬ: ರಸ್ತೆ ಬದಿಯ ಹುಲ್ಲು ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಸುಟ್ಟು ಹೋಗಿರುವ ಘಟನೆ ಕಡಬದ ಸಮೀಪದ ಕಳಾರ ಪ್ರದೇಶದಲ್ಲಿ ನಡೆದಿದೆ. ಕಡಬ ಪೊಲೀಸರು ಸಮಯಕ್ಕೆ ಸರಿಯಾಗಿ ಘಟನಾ ಸ್ಥಳಕ್ಕೆ ಬಂದು ಅನಾಹುತವನ್ನು ತಪ್ಪಿಸಿದ್ದಾರೆ.


ಶುಕ್ರವಾರ ಮಧ್ಯಾಹ್ನ ಟ್ರಾನ್ಸ್ ಫಾರ್‌ಮರಿನಿಂದ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಆ ಪ್ರದೇಶದ ಸುತ್ತಮುತ್ತಲಿನ ಹುಲ್ಲು ಪ್ರದೇಶಕ್ಕೆ ಬೆಂಕಿ ತಗುಲಿತ್ತು, ಆದರೆ ಈ ಘಟನೆಯ ಮಾಹಿತಿಯನ್ನು ಪಡೆದ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.


ಘಟನಾ ಸ್ಥಳಕ್ಕೆ ಎಸ್.ಐ ರುಕ್ಮ ನಾಯ್ಕ ಸ್ಥಳಕ್ಕೆ ಆಗಮಿಸಿದ್ದರು, ಅಲ್ಲದೆ ಎ.ಎಸ್.ಐ ಚಂದ್ರಶೇಖರ್, ಹೆಡ್ ಕಾನ್ಸ್ಟೇಬಲ್ ಭವಿತ್ ಬೆಂಕಿ ಆರಿಸುವ ಕೆಲಸದಲ್ಲಿ ತೊಡಗಿದರು.

- Advertisement -

Latest News

error: Content is protected !!