Wednesday, June 24, 2026
Homeತಾಜಾ ಸುದ್ದಿಕುಂಬಾರ ಜನಾಂಗದ ನಿಂದನೆ: ನಟ ಸಿಹಿಕಹಿ ಚಂದ್ರು ವಿರುದ್ಧ ಕೇಸ್ ದಾಖಲು

ಕುಂಬಾರ ಜನಾಂಗದ ನಿಂದನೆ: ನಟ ಸಿಹಿಕಹಿ ಚಂದ್ರು ವಿರುದ್ಧ ಕೇಸ್ ದಾಖಲು

- Advertisement -
- Advertisement -

ಬೆಂಗಳೂರು: ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಒಂದರಲ್ಲಿ ಕುಂಬಾರ ಜನಾಂಗದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನುವ ಆರೋಪದ ಮೂಲಕ ನಟ, ನಿರೂಪಕ ಸಿಹಿಕಹಿ ಚಂದ್ರು ಅವರು ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ.

ಕರ್ನಾಟಕ ರಾಜ್ಯ ಕುಂಬಾರ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಎಂ.ಪಿ. ವರ್ಷ ಎಂಬವರು ನಟ ಸಿಹಿಕಹಿ ಚಂದ್ರು ಅವರ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಮಾತ್ರವಲ್ಲ, ಸಿಹಿಕಹಿ ಚಂದ್ರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿಹಿಕಹಿ ಚಂದ್ರು ಇದೇ ಏಪ್ರಿಲ್ 19ರಂದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಡಿಕೊಂಡಿರುವ ಪೋಸ್ಟ್​ಗೆ ಕುಂಬಾರರನ್ನು ಅವಮಾನಿಸುವಂಥ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಈ ಮೂಲಕ ಅವರು ಜಾತಿನಿಂದನೆ ಎಸಗಿದ್ದಾರೆ. ಈ ಪೋಸ್ಟ್​ನಲ್ಲಿ ಹಾಕಿಕೊಂಡಿರುವ ಆ ಸಾಲನ್ನು ಅವರು ತೆಗೆಯಬೇಕು, ಕುಂಬಾರ ಜನಾಂಗದ ಕ್ಷಮೆ ಯಾಚಿಸಬೇಕು. ಮಾತ್ರವಲ್ಲ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

- Advertisement -

Latest News

error: Content is protected !!