Thursday, June 27, 2024
Homeತಾಜಾ ಸುದ್ದಿವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಎಫ್ ಐ ಆರ್;ಯಾವುದೇ ಕ್ಷಣದಲ್ಲಾದರೂ ಬಳಿಕ ಸೂರಜ್...

ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಎಫ್ ಐ ಆರ್;ಯಾವುದೇ ಕ್ಷಣದಲ್ಲಾದರೂ ಬಳಿಕ ಸೂರಜ್ ರೇವಣ್ಣ ಬಂಧನ ಸಾಧ್ಯತೆ

spot_img
- Advertisement -
- Advertisement -

ಹಾಸನ; ಅಸಹಜ  ಲೈಂಗಿಕ ದೌರ್ಜನ್ಯ ಪ್ರಕರಣದಡಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 , 342 ಹಾಗೂ 506 ರಡಿ ಕೇಸ್ ದಾಖಲು ಮಾಡಲಾಗಿದೆ.ಸಲಿಂಗಕಾಮ ಆರೋಪದಡಿ ಸೂರಜ್ ರೇವಣ್ಣ ವಿರುದ್ಧ  ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತನಿಂದ ಕಂಪ್ಲೆಂಟ್ ನೀಡಿದ್ದಾರೆ.

ಸದ್ಯ ಹಾಸನದ ಸೆನ್ ಠಾಣೆಯಲ್ಲಿ ಸೂರಜ್ ವಿಚಾರಣೆ ಎದುರಿಸ್ತಿದ್ದಾರೆ. ವಿಚಾರಣೆ ಬಳಿಕ ಸೂರಜ್ ರೇವಣ್ಣ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನುಈಗಾಗಲೇ ಹಾಸನದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸರುವ ಸೂರಜ್ ರೇವಣ್ಣ ನನ್ನ ವಿರುದ್ದ ಎಲ್ಲಾ ರೀತಿಯಲ್ಲಿ ಷಡ್ಯಂತ್ರ ನಡೆಯುತ್ತಿದ್ದು, ಎಲ್ಲವೂ ಕಾನೂನು ಪ್ರಕಾರ ತನಿಖೆಯಾಗಲಿ ಅಂಥ ಅವರು ಹೇಳಿದರು. ಇದಲ್ಲದೇ ನನ್ನ ವಿರುದ್ದ ದೂರು ನೀಡಿರುವ ಯುವಕನ ವಿರದ್ದ ಕೂಡ ದೂರು ದಾಖಲಾಗಿದ್ದು, ಎಲ್ಲವೂ ತನಿಖೆಯಿಂದ ಸತ್ಯ ಹೊರ ಬರಲಿ ಎಂದಿದ್ದಾರೆ.

- Advertisement -
spot_img

Latest News

error: Content is protected !!