Wednesday, June 24, 2026
Homeಕರಾವಳಿಉಡುಪಿಉಡುಪಿ: ಸಿಸಿ ಟಿವಿ ಲೈವ್ ಮಾನಿಟರಿಂಗ್ ಮೂಲಕ ಕಳ್ಳ ಅರೆಸ್ಟ್

ಉಡುಪಿ: ಸಿಸಿ ಟಿವಿ ಲೈವ್ ಮಾನಿಟರಿಂಗ್ ಮೂಲಕ ಕಳ್ಳ ಅರೆಸ್ಟ್

- Advertisement -
- Advertisement -

ಉಡುಪಿ: ಸಿಸಿ ಟಿವಿಯ ಲೈವ್ ದೃಶ್ಯ ಆಧರಿಸಿ ಕಳ್ಳತನ ಮಾಡುತ್ತಿದ್ದಾಗಲೇ ಕಳ್ಳ ಸೆರೆ ಹಿಡಿಯಲ್ಪಟ್ಟ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ.

ಗಂಗೊಳ್ಳಿಯ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘದ ಕಛೇರಿಗೆ ನುಗ್ಗಿದ್ದ ಕಳ್ಳನನ್ನು ಸಿಸಿ ಟಿವಿಯ ಮೂಲಕ ಗಮನಿಸಿ ಬಂಧಿಸಲಾಗಿದೆ.

ಲೈವ್ ಮಾನಿಟರಿಂಗ್ ಮೂಲಕ ರಾತ್ರಿ 1.45ರ ವೇಳೆಗೆ ಸಂಘದ ಕಚೇರಿಯ ಕಿಟಕಿ ಮುರಿದು ಒಳ ನುಗ್ಗಿದ್ದ ಕಳ್ಳನ ಚಲನವಲನ ನೋಡಿ ಲೈವ್ ಮಾನಿಟರಿಂಗ್ ಸಂಸ್ಥೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಆಧರಿಸಿ ಹತ್ತು ನಿಮಿಷಗಳಲ್ಲೇ ಘಟನಾ ಸ್ಥಳಕ್ಕೆ ತೆರಳಿದ್ದ ಪೊಲೀಸರು ಕಳ್ಳನನ್ನು ಅರೆಸ್ಟ್ ಮಾಡಿದ್ದಾರೆ.ಕಳ್ಳತನ ಯತ್ನದ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!