Thursday, June 4, 2026
Homeತಾಜಾ ಸುದ್ದಿಈಶ್ವರಪ್ಪ ವಿರುದ್ದ ಎಫ್ ಐಆರ್ ಆಗಿದೆ, ಕಾನೂನು ಪ್ರಕಾರ ತನಿಖೆ ನಡೆಯುತ್ತದೆ : ಸಿಎಂ

ಈಶ್ವರಪ್ಪ ವಿರುದ್ದ ಎಫ್ ಐಆರ್ ಆಗಿದೆ, ಕಾನೂನು ಪ್ರಕಾರ ತನಿಖೆ ನಡೆಯುತ್ತದೆ : ಸಿಎಂ

- Advertisement -
- Advertisement -

ಮಂಗಳೂರು: ಈಶ್ವರಪ್ಪ ವಿರುದ್ದ ಎಫ್ ಐಆರ್ ಆಗಿದೆ, ಎಲ್ಲಾ ವಿವರ ಪಡೆದುಕೊಂಡಿದ್ದೇನೆ. ಈ ಬಗ್ಗೆ ಈಶ್ವರಪ್ಪನವರತ್ರ ಮಾತನಾಡ್ತೇನೆ ಎಂದು ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಫೋನಲ್ಲೂ ಕೆಲವು ವಿಚಾರ ಮಾತನಾಡಿದ್ದೇನೆ .ಅವರನ್ನ ಕರೆಸಿಯೂ ಕೆಲವು ವಿಚಾರ ಮತ್ತೆ ಮಾತನಾಡ್ತೇನೆ. ರಾಜೀನಾಮೆ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಿಲ್ಲ, ಒನ್ ಟು ಒನ್ ಮಾತನಾಡಿದ್ರೆ ಸ್ಪಷ್ಟವಾಗುತ್ತೆ. ಅಲ್ಲಿನ ಘಟನೆ ಮತ್ತು ಎಫ್ ಐಆರ್ ಆದ ನಂತ್ರ ಏನಾಗಿದೆ ಅಂತ ಅವರ ಜೊತೆ ಮಾತನಾಡ್ತೇನೆ. ವಿರೋಧ ಪಕ್ಷದವರು ಇದರಲ್ಲಿ ತಪ್ಪು ಕಂಡು ಹುಡುಕೋ ಪ್ರಯತ್ನ ಮಾಡ್ತಿದಾರೆ ಅಂದ್ರು..

ತನಿಖೆ ನಂತರ ಸತ್ಯಾಂಶ ಹೊರಗೆ ಬರುತ್ತೆ, ತನಿಖೆಯಲ್ಲಿ ಯಾರು ಇದರಲ್ಲಿ ಪಾತ್ರ ವಹಿಸಿದ್ದಾರೆ, ಮತ್ತು ಇದರ ಹಿನ್ನೆಲೆ ಏನು ಅನ್ನೋದು ಗೊತ್ತಾಗುತ್ತೆ ಕಾನೂನು ಪ್ರಕಾರ ತನಿಖೆ ನಡೆಯುತ್ತದೆ, ನಾವು ಹಸ್ತಕ್ಷೇಪ ಮಾಡಲ್ಲ, ವರಿಷ್ಟರಿಗೆ ಎಲ್ಲಾ ವಿಚಾರ ಗೊತ್ತಿದೆ, ನಾನು ಕೂಡ ಹೇಳಿದ್ದೇನೆ, ಅವರಿಗೂ ಗೊತ್ತಿದೆ ಎಂದರು..

- Advertisement -

Latest News

error: Content is protected !!