Friday, May 24, 2024
Homeಕರಾವಳಿಉಪ್ಪಿನಂಗಡಿ:  ತ್ಯಾಜ್ಯವನ್ನು‌ ನದಿಗೆ ಸುರಿಯುತ್ತಿದ್ದ ಬಾರ್ ಆಂಡ್ ರೆಸ್ಟೋರೆಂಟ್ ಗೆ  ದಂಡ

ಉಪ್ಪಿನಂಗಡಿ:  ತ್ಯಾಜ್ಯವನ್ನು‌ ನದಿಗೆ ಸುರಿಯುತ್ತಿದ್ದ ಬಾರ್ ಆಂಡ್ ರೆಸ್ಟೋರೆಂಟ್ ಗೆ  ದಂಡ

spot_img
- Advertisement -
- Advertisement -

ಉಪ್ಪಿನಂಗಡಿ: ನೇತ್ರಾವತಿ ನದಿ ನೀರಿಗೆ ಕಸ, ಮಲೀನ ತ್ಯಾಜ್ಯಗಳನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಇಲ್ಲಿನ ನದಿ ದಡದಲ್ಲಿರುವ ಬಾರ್ ಆಯಂಡ್ ರೆಸ್ಟೋರೆಂಟ್‍ಗೆ 5 ಸಾವಿರ ರೂ. ದಂಡ ವಿಧಿಸಿದೆ.

ಇಲ್ಲಿನ ನಿರಾಲ ಬಾರ್ ಆಂಡ್  ರೆಸ್ಟೋರೆಂಟ್‍ನವರು ಹೊಟೇಲ್‍ನ ಕಸ ಹಾಗೂ ಮಲೀನ ತ್ಯಾಜ್ಯಗಳನ್ನು ನದಿಗೆ ಎಸೆಯುತ್ತಿದ್ದ ಬಗ್ಗೆ ಉಪ್ಪಿನಂಗಡಿ ಸ್ವಚ್ಛತಾ ಘಟಕದ ಮೇಲುಸ್ತುವಾರಿ ಸಮಿತಿ ಸದಸ್ಯರು ಪ್ರಕರಣ ಪತ್ತೆ ಹಚ್ಚಿ ಪಂಚಾಯತ್‍ಗೆ ದೂರು ನೀಡಿದ್ದರು.

ಅದರಂತೆ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ 5 ಸಾವಿರ ದಂಡ ವಿಧಿಸಿದರು.

ನದಿಗೆ ಎಸೆಯುವ ವೇಳೆ ನದಿ ದಡದ ಮೇಲೆ ಬಿದ್ದಿರುವ ಕಸದ ರಾಶಿಯನ್ನು ಸಂಜೆಯ ಒಳಗಾಗಿ ತೆರವು ಮಾಡಬೇಕು. ಇಲ್ಲದಿದ್ದಲ್ಲಿ ಮತ್ತೆ 10 ಸಾವಿರ ರೂಪಾಯಿ ದಂಡ ತೆರಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಪಿಡಿಒ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!