
ಬಂಟ್ವಾಳ ; ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ಕಚೇರಿ ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ , ಪ್ರತಿಷ್ಠಾನ (ರಿ)ಮಂಗಳೂರು ಬ್ಯಾಂಕ್ ಆಫ್ ಬರೋಡ ಮಾಣಿ ಶಾಖೆ ಇವರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಮಾಣಿ ,ಭಾರತೀಯ ವಿಕಾಸ್ ಟ್ರಸ್ಟ್ ಮಣಿಪಾಲ ಇವರ ಸಹಭಾಗಿತ್ವದಲ್ಲಿ ಆರ್ಥಿಕ ಸೇರ್ಪಡೆ ಶುದ್ಧತಾ ಅಭಿಯಾನ ಹಾಗೂ ತರಬೇತಿ ಕಾರ್ಯಕ್ರಮ ಪ್ರೇಮ ರವರ ಪ್ರಾರ್ಥನೆಯೊಂದಿಗೆ ಮಾಣಿ ಗ್ರಾಮ ಪಂಚಾಯತ್ ನ ಮಾಣಿಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ NRLM ಶೆಡ್ ನಲ್ಲಿ ,ಪಂಚಾಯತ್ ಸದಸ್ಯರಾದ ಇಬ್ರಾಹಿಂ ಕೆ ಅಧ್ಯಕ್ಷತೆಯಲ್ಲಿ ಜರುಗಿತು.
ಬ್ಯಾಂಕ್ ಆಫ್ ಬರೋಡಾದ ವಲಯ ಮುಖ್ಯಸ್ಥರಾದ ರಾಜೇಶ್ ಶರ್ಮ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ ಜನಧನ ಖಾತೆಯ ಬಗ್ಗೆ ಮಾಹಿತಿಗಳನ್ನು ನೀಡಿದರು. ದೇ.ಎನ್ .ಆರ್ .ಎಲ್ ನ ,ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಹರಿಪ್ರಸಾದ್ ರವರು ವೈಯಕ್ತಿಕ ಸಾಲ ,ಗುಂಪು ಸಾಲ ಹಾಗೂ ಸಿಐಎಫ್ ಸಾಲಗಳ ಬಗ್ಗೆ ಮಾತನಾಡಿ ಒಕ್ಕೂಟದ ಸದಸ್ಯರು ಆರ್ಥಿಕ ಚಟುವಟಿಕೆಗಳನ್ನು ಮಾಡಿ ಸ್ವಾಾವಲಂಬಿಗಳಾಗಿ ಬದುಕಬೇಕೆಂದು ಸದಸ್ಯರಿಗೆ ತಿಳಿಸಿದರು. ಭಾರತೀಯ ವಿಕಾಸ ಟ್ರಸ್ಟ್ ನ ವ್ಯವಸ್ಥಾಪಕರಾದ ಜೀವನ್ ಕೊಲ್ಯರವರು ತರಬೇತುದಾರರಿಗೆ ತರಬೇತಿಯ ನಿಯಮಗಳನ್ನು ತಿಳಿಸಿದರು. VRDF ನ ಮುಖ್ಯ ಕಾರ್ಯನಿರ್ವಾಣಾದಿಕಾರಿಗಳಾದ ಜ್ಯೋತಿರಾಜ್ ರವರು ಬ್ಯಾಂಕಿನಲ್ಲಿ ದೊರೆಯ ಸೌಲಭ್ಯಗಳನ್ನು ಪಡೆದು ಕೊಳ್ಳುವಂತೆ ತಿಳಿಸಿದರು .ಬಾಂಕ್ ಒಫ್ ಬರೋಡಾದ ಸಿಬ್ಬಂದಿಯಾದ ನೀತಾರವರು ಪ್ರದಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಹಾಗು ಜೀವನ್ ಜ್ಯೋತಿ ವಿಮೆಯ ಬಗ್ಗೆ ಮಾಹಿತಿ ನೀಡಿ ಅದರಿಂದ ದೊರಕುವ ಸೌಲಭ್ಯಗಳ ಬಗ್ಗೆ ತಿಳಿಸಿದರು .ವೇದಿಕೆಯಲ್ಲಿ ಬ್ಯಾಂಕ್ ಒಫ್ ಬರೋಡ ಮಾಣಿ ಶಾಖೆಯ ಪ್ರಬಂಧಕರಾದ ಅಭಿಲಾಷ್ ಅಜಿತ್ ರವರು ,ಪಂಚಾಯತ್ ಸದಸ್ಯರಾದ ಮೆಲ್ವಿನ್ ಕಿಶೋರ್ ರವರು , ಬಂಟ್ವಾಳ ದ ಸಂಜೀವಿನಿ ತಾಲೂಕು ವ್ಯವಸ್ಥಾಪಕ ಶ್ರೀ ಪ್ರದೀಪ್ ಕಾಮತ್ ರವರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ರವರು ,ಸಂಪನ್ಮೂಲ ವ್ಯಕ್ತಿಗಳಾದ ಮೀನಾಕ್ಷಿ ಅವರು ಉಪಸ್ಥಿತರಿದ್ದರು.ಬಾಂಕ್ ಒಫ್ ಬರೋಡ ಸಿಬ್ಬಂದಿ ಪ್ರಮೀಳಾ ಸಹಕರಿಸಿದರು .ಬ್ಯಾಂಕ್ ಒಫ್ ಬರೋಡ ಮಂಗಳೂರು ಶಾಖೆಯ ಪ್ರಜ್ವಲ್ ರವರು ಕಾರ್ಯಕ್ರಮ ನಿರೂಪಿಸಿದರು .ಲೈಲಾಬಿ ಧನ್ಯವಾದ ವಿತ್ತರು .ಕಾರ್ಯಕ್ರಮದಲ್ಲಿ ಮಾಣಿ ,ನೆಟ್ಲಮುಡ್ನೂರು ,ಬರಿಮಾರು ,ಪೆರಾಜೆ ಒಕ್ಕೂಟದ MBK,LCRP ಹಾಗೂ ಪದಾಧಿಕಾರಿಗಳು ಉಪಸ್ಥಿದರಿದ್ದರು .


