- Advertisement -


- Advertisement -
ಸುಳ್ಯ; ಬಾವಿಗೆ ಹಾರಿ 10 ತರಗತಿ ವಿದ್ಯಾರ್ಥಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಐವರ್ನಾಡು ರಬ್ಬರ್ ಫ್ಯಾಕ್ಟರಿ ಬಳಿ ನಡೆದಿದೆ. ಕೌಶಿಕ್ ಕುಮಾರ್ ಮೃತ ವಿದ್ಯಾರ್ಥಿ.
ಮನೆ ಸಮೀಪದ ಸಾರ್ವಜನಿಕ ಬಾವಿಗೆ ಕೌಶಿಕ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು ಪೈಚಾರಿನ ಮುಳುಗು ತಜ್ಞರಾದ ಅಬ್ಬಾಸ್ ಶಾಂತಿನಗರ ಹಾಗೂ ಬಶೀರ್ ಆರ್.ಬಿ, ಅಶ್ರಫ್ ಅಚ್ಚಪ್ಪು ರವರು ಬಾವಿಗೆ ಇಳಿದು ಮೃತ ದೇಹವನ್ನು ಮೇಲೆತ್ತಿದರು.ಬಳಿಕ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಿದ್ಯಾರ್ಥಿ ಸುಳ್ಯದ ಖಾಸಗಿ ಶಾಲಾ 10 ನೇ ತರಗತಿ ವಿದ್ಯಾರ್ಥಿಯಾಗಿದ್ದು ತಂದೆ ವಿಜಯಕಾಂತ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
- Advertisement -


