Wednesday, June 24, 2026
Homeಕರಾವಳಿಉಡುಪಿಪಡುಬಿದ್ರಿ; ಟೈಮಿಂಗ್ ವಿಚಾರವಾಗಿ ಟೈಂ ಕೀಪರ್ ಹಾಗೂ ಖಾಸಗಿ ಬಸ್ ಚಾಲಕನ ಮಧ್ಯೆ ವಾಗ್ವಾದ; ಕೋಪಗೊಂಡು...

ಪಡುಬಿದ್ರಿ; ಟೈಮಿಂಗ್ ವಿಚಾರವಾಗಿ ಟೈಂ ಕೀಪರ್ ಹಾಗೂ ಖಾಸಗಿ ಬಸ್ ಚಾಲಕನ ಮಧ್ಯೆ ವಾಗ್ವಾದ; ಕೋಪಗೊಂಡು ಬಸ್ ನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ವಿಶ್ರಾಂತಿ ಪಡೆದ ಡ್ರೈವರ್

- Advertisement -
- Advertisement -

ಪಡುಬಿದ್ರಿ; ಟೈಮಿಂಗ್ ವಿಚಾರವಾಗಿ ಟೈಂ ಕೀಪರ್ ಹಾಗೂ ಖಾಸಗಿ ಬಸ್ ಚಾಲಕನ ಮಧ್ಯೆ ವಾಗ್ವಾದ ಉಂಟಾಗಿ ಕೋಪಗೊಂಡು ಬಸ್ ಡ್ರೈವರ್ ಬಸ್ ನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ವಿಶ್ರಾಂತಿ ಪಡೆದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.

ಕಾಪುವಿನ ಟೈಂ ಕೀಪರ್ ಶರತ್ ಹಾಗೂ ಖಾಸಗಿ ಬಸ್ ಚಾಲಕ ಅಜೀಜ್ ಮಧ್ಯೆ ಟೈಮಿಂಗ್ ವಿಚಾರಕ್ಕೆ  ವಾಗ್ವಾದ ನಡೆದಿದೆ. ಬಳಿಕ ವಾಗ್ವಾದ ಮುಂದುವರಿದು ಪಡುಬಿದ್ರಿ ತಲುಪಿದ ಸರ್ವಿಸ್ ಬಸ್ ಎಂಎಂಎಸ್‌ಗೆ ಟೈಂ ಕೀಪರ್ ಶರತ್ ಅಡ್ಡ ನಿಂತಾಗ ಕುಪಿತಗೊಂಡ ಚಾಲಕ ಅಜೀಜ್ ತನ್ನ ಮಾಲೀಕರಿಗೆ ಕರೆ ಮಾಡಿ, ಬಳಿಕ ಬಸ್ಸನ್ನೇ ಹೆದ್ದಾರಿಗಡ್ಡವಾಗಿ ನಿಲ್ಲಿಸಿ ಬಸ್ ತಂಗುದಾಣದಲ್ಲಿ ‘ವಿಶ್ರಾಂತಿ’ ಪಡೆದಿದ್ದಾನೆ. ಈ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರುಗಳು ದಾಖಲಾಗಿವೆ.

ಸುಮಾರು 5 ನಿಮಿಷಗಳ ಕಾಲ ನಡೆದಿದ್ದ ಈ ಪ್ರಹಸನದಲ್ಲಿ ಪಡುಬಿದ್ರಿ ಪೊಲೀಸರ ಮಧ್ಯಪ್ರವೇಶದವರೆಗೂ ಉಡುಪಿ – ಮಂಗಳೂರು ಏಕಮುಖ ರಸ್ತೆಯಲ್ಲಿ ಹೆದ್ದಾರಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು.

- Advertisement -

Latest News

error: Content is protected !!