Thursday, June 4, 2026
Homeಕರಾವಳಿಸುಳ್ಯ: ಕೆಲಸ ಬೇಕು ಎಂದು ಬಂದು ಮೊಬೈಲ್‌, ಬೈಕ್‌ ಕದ್ದು ಪರಾರಿಯಾದ ಯುವಕ

ಸುಳ್ಯ: ಕೆಲಸ ಬೇಕು ಎಂದು ಬಂದು ಮೊಬೈಲ್‌, ಬೈಕ್‌ ಕದ್ದು ಪರಾರಿಯಾದ ಯುವಕ

- Advertisement -
- Advertisement -

ಸುಳ್ಯ: ಕೆಲಸ ಬೇಕು ಎಂದು ಬಂದು ಯುವಕನೊಬ್ಬ ಮೊಬೈಲ್‌, ಬೈಕ್‌ ಕದ್ದು ಪರಾರಿಯಾಗಿರುವ ಘಟನೆ ಅರಂತೋಡಿನ ಹೊಟೇಲ್‌ವೊಂದರಲ್ಲಿ ನಡೆದಿದೆ.

ಅರಂತೋಡಿನ ಹೊಟೇಲ್‌ವೊಂದರಲ್ಲಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬರಾಯದ ರಿಯಾಜ್‌ ಕೆಲಸ ಮಾಡಿಕೊಂಡಿದ್ದರು. ಅಲ್ಲಿಗೆ ಅವರ ಪರಿಚಯದ ಹರ್ಷಿಕೇಶ್‌ ಎಂಬಾತ ಬಂದು ಕೆಲಸ ಕೇಳಿದ್ದು, ಅದರಂತೆ ಆತನನ್ನು ರಿಯಾಜ್‌ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದಾರೆ. ಮಧ್ಯಾಹ್ನ ರಿಯಾಜ್‌ ವಿಶ್ರಾಂತಿ ಪಡೆದು ಎದ್ದು ನೋಡಿದಾಗ ಹರ್ಷಿಕೇಶ್‌ ರೂಂನಲ್ಲಿ ಕಾಣಿಸಿಲ್ಲ. ಜತೆಗೆ ರಿಯಾಜ್‌ ಅವರ 14 ಸಾವಿರ ಮೌಲ್ಯದ ಮೊಬೈಲ್, 60 ಸಾವಿರ ಮೌಲ್ಯದ ಬೈಕ್ ಕೂಡ ಕಾಣೆಯಾಗಿದೆ. ಈ ಬಗ್ಗೆ ಸುಳ್ಯ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!