Saturday, June 6, 2026
Homeಕರಾವಳಿಉಡುಪಿಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕಂಡಕ್ಟರ್‌ ಗಳ ಫೈಟಿಂಗ್  : ಜಟ್ಟಿಗಳಂತೆ ಬೀದಿ ಕಾಳಗ ನಡೆಸಿದ...

ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕಂಡಕ್ಟರ್‌ ಗಳ ಫೈಟಿಂಗ್  : ಜಟ್ಟಿಗಳಂತೆ ಬೀದಿ ಕಾಳಗ ನಡೆಸಿದ ದೃಶ್ಯ ವೈರಲ್

- Advertisement -
- Advertisement -

ಉಡುಪಿ : ಟೈಮಿಂಗ್ ವಿಷಯದಲ್ಲಿ ಪ್ರತಿನಿತ್ಯ ಜಗಳ ಮಾಡುವ ಖಾಸಗಿ ಬಸ್ ನಿರ್ವಾಹಕರು ಒಂದು ಹೆಜ್ಜೆ ಮುಂದೆ ಹೋಗಿ ನಡುರಸ್ತೆಯಲ್ಲೇ ಫೈಟಿಂಗ್ ಮಾಡಿಕೊಂಡ ದೃಶ್ಯವೊಂದು ಭಾರೀ ವೈರಲ್ ಆಗುತ್ತಿದೆ. ಉಡುಪಿಯ  ಸಿಟಿ ಬಸ್ ನಿಲ್ದಾಣ ದಲ್ಲಿ ನಿರ್ವಾಹಕರಿಬ್ಬರು ಜಟ್ಟಿಗಳಂತೆ  ಬೀದಿ ಕಾಳಗ ನಡೆಸಿದ್ದಾರೆ.  ಟೈಮಿಂಗ್ಸ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಇವರಿಬ್ಬರು ಹೊಡೆದಾಡಿಕೊಂಡಿದ್ದಾರೆ. ವೈರಲ್

ಹೂಡೆ ಕೆಮ್ಮಣ್ಣು ಕಡೆ ತೆರಳುವ ಈ ಎರಡು ಬಸ್ಸುಗಳ ಕಂಡೆಕ್ಟರ್ ಗಳು  ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಡಿಕೊಂಡದ್ದು ಕೆಲ ಕಾಲ ನೆರೆದ ಜನರಿಗೆ ಮನರಂಜನೆ ನೀಡಿದ್ದು ಮಾತ್ರವಲ್ಲ ,ಆಕ್ರೋಶಕ್ಕೂ ಕಾರಣವಾಗಿದೆ..ಈ ಬೀದಿ ಜಗಳದ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು ,ಕಂಡಕ್ಟರ್ ಗಳ ಈ ಅಸಭ್ಯ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

- Advertisement -

Latest News

error: Content is protected !!