Saturday, May 18, 2024
Homeಕರಾವಳಿಗುಂಡ್ಯದಲ್ಲಿ ನೈತಿಕ ಪೊಲೀಸ್ ಗಿರಿ ಆರೋಪದಲ್ಲಿ ಹಿಂದೂ ಕಾರ್ಯಕರ್ತರ ಬಂಧನ: ಶಾಸಕ ಸಂಜೀವ ಮಠಂದೂರು ವಿರುದ್ಧ...

ಗುಂಡ್ಯದಲ್ಲಿ ನೈತಿಕ ಪೊಲೀಸ್ ಗಿರಿ ಆರೋಪದಲ್ಲಿ ಹಿಂದೂ ಕಾರ್ಯಕರ್ತರ ಬಂಧನ: ಶಾಸಕ ಸಂಜೀವ ಮಠಂದೂರು ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ

spot_img
- Advertisement -
- Advertisement -

ಪುತ್ತೂರು: ನಿನ್ನೆ ಗುಂಡ್ಯ ಅನ್ಯಕೋಮಿನ ಜೋಡಿ ಪತ್ತೆ ಪ್ರಕರಣದಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಡಿ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಆದರೆ ಆರೋಪಿಗಳ ಪರವಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ನಿಂತಿಲ್ಲ ಎಂಬ ಕಾರಣಕ್ಕೆ ಹಿಂದೂ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.

ಉಪ್ಪಿನಂಗಡಿ ಬಳಿ ಶಾಸಕ ಮಠಂದೂರು ಅವರನ್ನು ತಡೆದು ವಾಗ್ವಾದ ನಡೆಸಿದ್ದಾರೆ ಕಾರ್ಯಕರ್ತರು. ಮನೆಯಲ್ಲಿದ್ದೇನೆ ಎಂದು ಹೇಳಿ ಬೆಂಗಳೂರಿಗೆ ತೆರಳುತ್ತಿದ್ದರು ಶಾಸಕ. ಈ ವೇಳೆ ಉಪ್ಪಿನಂಗಡಿ ಬಳಿ ಶಾಸಕ ಮಠಂದೂರು ಅವರನ್ನು ತಡೆದು ಧಿಕ್ಕಾರ ಕೂಗಿದ್ದಾರೆ ಹಿಂದೂ ಕಾರ್ಯಕರ್ತರು. ಕಾರ್ಯಕರ್ತರ ಪರ ನಿಲ್ಲದ ಹಿನ್ನೆಲೆ ಶಾಸಕರ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.

ಬಿಜೆಪಿ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಹಿಂದೂ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ. ನೈತಿಕ ಪೊಲೀಸ್ ಗಿರಿ ಆರೋಪದ ಹಿನ್ನೆಲೆ  ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಪೊಲೀಸರು. ಬಾಲಚಂದ್ರ (35) ಮತ್ತು ರಂಜಿತ್( 31) ಬಂಧಿತ ಆರೋಪಿಗಳು. ನಿನ್ನೆ ಗುಂಡ್ಯದಲ್ಲಿ ಹಿಂದೂ ಯುವತಿ ಜೊತೆ ಕಾಣಿಸಿಕೊಂಡಿದ್ದ ಆಟೋ ಚಾಲಕ ನಜೀರ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಆರೋಪಿಗಳನ್ನು ಬಂಧಿಸಲಾಗಿದೆ.

ಆಟೋ ಚಾಲಕ ನಜೀರ್ ನೀಡಿದ ದೂರಿನ ಮೇಲೆ  ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!