Tuesday, June 9, 2026
Homeಇತರಟಿವಿ ರಿಮೋಟ್ ಗಾಗಿ ನಡೆದ ಸಹೋದರಿಯರ ಜಗಳ ಸಾವಿನಲ್ಲಿ ಅಂತ್ಯ

ಟಿವಿ ರಿಮೋಟ್ ಗಾಗಿ ನಡೆದ ಸಹೋದರಿಯರ ಜಗಳ ಸಾವಿನಲ್ಲಿ ಅಂತ್ಯ

- Advertisement -
- Advertisement -

ಮೀರತ್ : ಕೆಲವೊಂದು ಸಣ್ಣ ಸಣ್ಣ ವಿಚಾರಗಳು ಹೇಗೆ ಪ್ರಾಣಕ್ಕೆ ಕುತ್ತು ತರುತ್ತವೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಮೂವರು ಅಪ್ರಾಪ್ತ ಸಹೋದರಿಯರ ನಡುವೆ ಒಂದು ರಿಮೋಟ್ ಗಾಗಿ ನಡೆದ ಜಗಳವೊಂದು ಸಾವಿನಲ್ಲಿ ಅಂತ್ಯವಾಗಿದೆ. ಉತ್ತರಪ್ರದೇಶದ ಮೀರತ್ ನಲ್ಲಿ ಹನ್ನೆರಡು ವರ್ಷ, ಹದಿನಾಲ್ಕು ವರ್ಷ ಹಾಗೇ 17 ವರ್ಷದ ಕೆಲವೊಂದು ಸಣ್ಣ ಸಣ್ಣ ವಿಚಾರಗಳು ಹೇಗೆ ಪ್ರಾಣಕ್ಕೆ ಕುತ್ತು ತರುತ್ತವೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

ಉತ್ತರಪ್ರದೇಶದ ಮೀರತ್ ನಲ್ಲಿ ಹನ್ನೆರಡು ವರ್ಷ, ಹದಿನಾಲ್ಕು ವರ್ಷ ಹಾಗೇ 17 ವರ್ಷದ ಮೂವರು ಸಹೋದರಿಯರ ಮಧ್ಯೆ ಬೇರೆ ಬೇರೆ ಚಾನೆಲ್ ಗಳನ್ನು ನೋಡುವ ವಿಚಾರಕ್ಕಾ ಸಣ್ಣದಾಗಿ ಶುರುವಾದ ಜಗಳ, ನಿಧಾನಕ್ಕೆತಾರಕ್ಕೇರಿದೆ. ಇದೇ ಕೋಪದಲ್ಲಿ ಹಿರಿಯ ಸಹೋದರಿ ಗೋಧಿ ಬೆಳೆಗೆ ಸಿಂಪಡಿಸುವ ಕ್ರಿಮಿ ನಾಶಕವನ್ನು ಕುಡಿದಿದ್ದಾಳೆ. ಭಯಗೊಂಡ ಇನ್ನಿಬ್ಬರು ಸಹೋದರಿಯರು ತಾವು ಕೂಡ ಕೂಡಲೇ ಅದನ್ನು ಸೇವಿಸಿದ್ದಾರೆ. ಇನ್ನು ಈ ಘಟನೆ ನಡೆಯುವಾಗ ಮನೆಯಲ್ಲಿ ಯಾರು ಇರಲಿಲ್ಲ. ಮನೆಯವರು ವಿಷಯ ತಿಳಿದು ಮನೆಗೆ ಬಂದು ಮೂವರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಹಿರಿಯ ಸಹೋದರಿ ಸಾವನ್ನಪ್ಪಿದ್ದಾಳೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ

- Advertisement -

Latest News

error: Content is protected !!