Wednesday, June 24, 2026
Homeತಾಜಾ ಸುದ್ದಿರಿಲೀಸ್ ಗೆ ರೆಡಿಯಾದ ಸುಶಾಂತ್ ಸಿನಿಮಾ, ತಾರೆಯರಿಂದ ಪ್ರಮೋಷನ್

ರಿಲೀಸ್ ಗೆ ರೆಡಿಯಾದ ಸುಶಾಂತ್ ಸಿನಿಮಾ, ತಾರೆಯರಿಂದ ಪ್ರಮೋಷನ್

- Advertisement -
- Advertisement -

ಮುಂಬೈ : ಸುಶಾಂತ್ ಸಿಂಗ್ ರಜಪೂತ್ ಅವರ ಅಗಲಿಕೆ ನೋವಿನಿಂದ ಅವರ ಅಭಿಮಾನಿಗಳು ಹೊರ ಬರುವ ಮುನ್ನವೇ ಅವರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸುಶಾಂತ್ ಅಭಿನಯದ ದಿಲ್ ಬೇಚಾರ ಸಿನಿಮಾ ಬಿಡುಗಡೆಯಾಗುತ್ತಿದೆ. ಡಿಸ್ನಿ ಹಾಟ್‍ಸ್ಟಾರ್‍ನಲ್ಲಿ ಈ ಸಿನಿಮಾ ರಿಲೀಸ್ ಆಗಲು ಸಜ್ಜಾಗಿದ್ದು, ಅದಕ್ಕೆ ಡೇಟ್ ಸಹ ಫಿಕ್ಸ್ ಮಾಡಲಾಗಿದೆ. ‘ದಿಲ್ ಬೆಚಾರ’ ಸಿನಿಮಾ ಬಿಡುಗಡೆ ಮಾಡಲು ಈಗಾಗಲೇ ಒಪ್ಪಂದವಾಗಿದ್ದು, ಜುಲೈ 24ಕ್ಕೆ ದಿಲ್ ಬೇಚಾರ ಸಿನಿಮಾ ಪ್ರದರ್ಶನಗೊಳ್ಳಲಿದೆ.

ರಾಜ್‍ಕುಮಾರ್ ರಾವ್, ಶ್ರದ್ಧಾ ಕಪೂರ್, ಗುರು ರಾಂಧಾವ, ಭೂಮಿ ಪೆಡ್ನೆಕರ್, ಕಾರ್ತಿಕ್ ಆರ್ಯನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ‘ದಿಲ್ ಬೆಚಾರ್ ‘ ಸಿನಿಮಾದ ಪ್ರಚಾರಕ್ಕಿಳಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯಾರೂ ಮನವಿ ಮಾಡದೆಯೇ ಸೆಲೆಬ್ರಿಟಿಗಳು ಸ್ವ-ಇಚ್ಛೆಯಿಂದ ಈ ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ.

ಸಂಜನಾ ಸಂಘಿ ನಾಯಕಿಯಾಗಿ ನಟಿಸಿರುವ ಈ ಸಿನಿಮಾವನ್ನು ಮುಖೇಶ್ ಚಾಬ್ರ ನಿರ್ದೇಶನ ಮಾಡಿದ್ದಾರೆ. ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರಕ್ಕೆ ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸುಶಾಂತ್ ಸಿಂಗ್ ಅವರ ಈ ಸಿನಿಮಾವನ್ನು ನೋಡದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

https://youtu.be/vqqD2uzaMJg

- Advertisement -

Latest News

error: Content is protected !!