Sunday, May 19, 2024
Homeತಾಜಾ ಸುದ್ದಿಬಾಡಿ ಶೇಮಿಂಗ್‍ಗೆ ದಿಟ್ಟ ಉತ್ತರ ನೀಡಿದ ಕನ್ನಡದ ನಟಿ: ಲಾಕ್​​ಡೌನ್​ ವೇಳೆ ಬರೋಬ್ಬರಿ 20 ಕೆ.ಜಿ...

ಬಾಡಿ ಶೇಮಿಂಗ್‍ಗೆ ದಿಟ್ಟ ಉತ್ತರ ನೀಡಿದ ಕನ್ನಡದ ನಟಿ: ಲಾಕ್​​ಡೌನ್​ ವೇಳೆ ಬರೋಬ್ಬರಿ 20 ಕೆ.ಜಿ ಇಳಿಕೆ

spot_img
- Advertisement -
- Advertisement -

ಚೆನ್ನೈ: ತಮಿಳು ಚಿತ್ರರಂಗದ ಒನ್ ಆ್ಯಂಡ್ ಓನ್ಲಿ ಲೇಡಿ ಕಾಮಿಡಿ ಸ್ಟಾರ್ ಅಂದ್ರೆ ಅದು ವಿದ್ಯುಲ್ಲೇಖಾ. ನೋಡಲು ದಪ್ಪಗಿದ್ದರೂ ಯಾವ ಸ್ಟಾರ್ ನಟರಿಗೂ ಕಮ್ಮಿ ಇಲ್ಲ, ಇವರ ಫ್ಯಾನ್‌ ಕ್ರೇಜ್‌. ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ದಪ್ಪಗಿದ್ದ ವಿದ್ಯುಲ್ಲೇಖಾ ಈಗ ಸ್ಟಾರ್‌ ನಟಿಯರು ತಿರುಗಿ ನೋಡುವಂಥ ಸೈಜ್‌ಗಿಳಿದಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ತಮ್ಮ ಕಾಮಿಡಿ ಟೈಮಿಂಗ್​ನಿಂದ ಪ್ರೇಕ್ಷಕರು ನಗಗಡಲಲ್ಲಿ ತೇಲುವಂತೆ ಮಾಡಿದ್ದಾರೆ ವಿದ್ಯುಲ್ಲೇಖಾ. ಆಕೆ ದಪ್ಪ ಇದ್ದಿದ್ದು ಕೂಡ ಕಾಮಿಡಿ ರೋಲ್​ಗಳಿಗೆ ಪ್ಲಸ್​ ಆಗಿತ್ತು. ಆದ್ರೀಗ ಏಕಾಏಕಿ 20 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ತಮಿಳು ನಟಿ.

ಕಳೆದೊಂದು ವರ್ಷದಿಂದ ತೂಕ ಇಳಿಸಿಕೊಳ್ಳಲು ವಿದ್ಯುಲ್ಲೇಖಾ ಕಸರತ್ತು ನಡೆಸ್ತಿದ್ರು. ಲಾಕ್​ಡೌನ್​ ಕಾರಣ ಶೂಟಿಂಗ್​​ನಿಂದ ಬಿಡುವು ಸಿಕ್ಕಿ ಮನೆಯಲ್ಲೇ ಇದ್ದ ವಿದ್ಯುಲ್ಲೇಖಾ ಕೊಬ್ಬು ಕರಗಿಸಿದ್ದಾರೆ.

ವಿದ್ಯುಲ್ಲೇಖಾ ದಪ್ಪವಿದ್ದ ಕಾರಣ ಚಿತ್ರದಲ್ಲೇ ಅನೇಕ ಬಾರಿ ಆಕೆಯ ಆಕಾರದ ಬಗ್ಗೆ ಹಾಸ್ಯ ಮಾಡುತ್ತಿದ್ದರು, ಇದು ಪಾತ್ರಕ್ಕೆ ಬೇಕೆಂದು ಸುಮ್ಮನಾಗುತ್ತಿದ್ದರು. ಆದರೆ ದಿನೆ ದಿನೇ ಅಪಹಾಸ್ಯ ಹೆಚ್ಚಾದ ಕಾರಣ ತಮ್ಮ ದೇಹ ದಂಡಿಸಲು ನಿರ್ಧರಿಸಿ, ಈಗ ಯಾವ ನಟಿಗೂ ಕಮ್ಮಿ ಇಲ್ಲ ಎನ್ನುವಂತೆ ಫಿಟ್ ಆಗಿದ್ದಾರೆ. ಎಲ್ಲರ ಹುಬ್ಬೇರುವಂತೆ ಮಾಡಿ ತೋರಿಸಿದ್ದಾರೆ. ಮನೆಯಲ್ಲೇ ತಯಾರಿಸಿದ ಆಹಾರ ಹಾಗೂ ಸತತ ವರ್ಕೌಟ್‌ನಿಂದ ವಿದ್ಯುಲ್ಲೇಖಾ ಆರೋಗ್ಯವೂ ಸುಧಾರಿಸಿದೆ. ನೋಡಲು ಸೂಪರ್ ಡೂಪರ್‌ ಆಗಿದ್ದಾರೆ.

ಬಾಡಿ ಟ್ರ್ಯಾನ್ಸ್‌ಫಾರ್ಮೇಷನ್ ಆದ ಮೇಲಂತೂ ಟ್ರೋಲ್ ಪೇಜ್‌ಗಳು ವಿದ್ಯುಲ್ಲೇಖಾ ಫ್ಯಾನ್‌ ಪೇಜ್‌ ಆಗೋಗಿದೆಯಂತೆ! ಚಿತ್ರರಂಗದಲ್ಲಿ ಹಾಗೂ ಜಾಹೀರಾತುಗಳಲ್ಲಿ ಇವರಿಗೀಗ ಅವಕಾಶಗಳು ಕೈ ಬೀಸಿ ಕರೆಯುತ್ತಿವೆ.

ಕನ್ನಡದ ರ್ಯಾಂಬೋ-2, ಜಾಗ್ವಾರ್​​ ಸಿನಿಮಾಗಳಲ್ಲೂ ವಿದ್ಯುಲ್ಲೇಖಾ ಬಣ್ಣ ಹಚ್ಚಿ ಕನ್ನಡ ಪ್ರೇಕ್ಷಕರನ್ನ ರಂಜಿಸಿದ್ರು. ಹಳೆಯ ಮತ್ತು ಹೊಸ ಫೋಟೋಗಳನ್ನ ಶೇರ್​ ಮಾಡಿ ‘ ಫೇಕ್​ ಕಾನ್ಫಿಡೆನ್ಸ್​ ವರ್ಸಸ್​​ ಆಕ್ಚುಲ್​ ಕಾನ್ಫಿಡೆಂಟ್​​’ ಅಂತ ಬರೆದು, ತೂಕ ಇಳಿಸಿಕೊಂಡ ಬಗೆಯನ್ನ ಹೇಳಿಕೊಂಡಿದ್ದಾರೆ. ನಟಿ ವಿದ್ಯುಲ್ಲೇಖ ಹೊಸ ಅವತಾರ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.

- Advertisement -
spot_img

Latest News

error: Content is protected !!