Wednesday, June 24, 2026
Homeಕರಾವಳಿಉಡುಪಿಉಡುಪಿ; ಊಟ ಮಾಡುವ ವೇಳೆ ಮೈಗೆ ಕೈ ತಾಗಿದ್ದಕ್ಕೆ ಎರಡು ಗುಂಪುಗಳ ಮಧ್ಯೆ ಹೊಡೆದಾಟ; ನಾಲ್ವರು...

ಉಡುಪಿ; ಊಟ ಮಾಡುವ ವೇಳೆ ಮೈಗೆ ಕೈ ತಾಗಿದ್ದಕ್ಕೆ ಎರಡು ಗುಂಪುಗಳ ಮಧ್ಯೆ ಹೊಡೆದಾಟ; ನಾಲ್ವರು ಆರೋಪಿಗಳು ಅರೆಸ್ಟ್

- Advertisement -
- Advertisement -

ಉಡುಪಿ; ಊಟ ಮಾಡುವ ವೇಳೆ ಮೈಗೆ ಕೈ ತಾಗಿದ್ದಕ್ಕೆ ಎರಡು ಗುಂಪುಗಳ ಮಧ್ಯೆ ಹೊಡೆದಾಟವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಅಮರ್‌ ಶೆಟ್ಟಿ, ಚಂದನ್‌ , ಧನುಷ್‌, ಅಜಯ್‌ ಬಂಧಿತರು. ನವೆಂಬರ್ 08 ರಂದು ಮಣಿಪಾಲದ ಈಶ್ವರ ನಗರದಲ್ಲಿರುವ Dee Tee ಬಾರ್‌ & ರೆಸ್ಟೋರೆಂಟ್‌ ನಲ್ಲಿ ಅಮರ್‌ ಶೆಟ್ಟಿ, ಧನುಷ್‌, ನಿತೇಶ್‌, ಸುಜನ್‌, ನಿನಾದ್‌ ಅಜಯ್‌ ಎನ್ನುವವರು ಊಟ ಮಾಡುತ್ತಿದ್ದರು, ಈ ವೇಳೆ ಚಂದನ್‌ ಎಂಬಾತನ ಕೈ ಅಮರ್‌ ಶೆಟ್ಟಿಯ ಮೈಗೆ ತಾಗಿದ ವಿಚಾರದಲ್ಲಿ ಇವರಲ್ಲಿ ಮಾತಿನ ಚಕಮಕಿ ನಡೆದಿದೆ.

ಬಳಿಕ ಬಾರ್ ನಿಂದ ಹೊರಬಂದವರು ರಸ್ತೆಯಲ್ಲೇ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡು ಬೈದಾಡಿಕೊಂಡಿದ್ದು, ಇದರ ಗಲಾಟೆಯ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಣಿಪಾಲ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.

- Advertisement -

Latest News

error: Content is protected !!