Thursday, June 4, 2026
Homeಕರಾವಳಿಮಂಗಳೂರುಬಂಟ್ವಾಳ; ಎರಡು ತಂಡಗಳ ನಡುವೆ ಗಲಾಟೆ: ಪ್ರಕರಣ ದಾಖಲು

ಬಂಟ್ವಾಳ; ಎರಡು ತಂಡಗಳ ನಡುವೆ ಗಲಾಟೆ: ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ; ಎರಡು ತಂಡಗಳ ನಡುವೆ ಗಲಾಟೆ ನಡೆದು ಚೂರಿಯಿಂದ ಇರಿದಿರುವ ಘಟನೆ  ಬಂಟ್ವಾಳದಲ್ಲಿ ನಡೆದಿದೆ.

ಆಗಸ್ಟ್ 4 ಭಾನುವಾರ ಸಂಜೆ ಹರೀಶ್ ಎಂಬವರು ಜಂಕ್ಷನ್ ಗೆ ಬಂದಿದ್ದರು. ಹೀಗೆ ಬಂದವರು ವಾಪಾಸ್  ಮನೆಗೆ ತೆರಳಲು ಜಂಕ್ಷನ್ ಬಳಿ ಮುಖ್ಯ ರಸ್ತೆಗೆ ಬಂದಿದ್ದಾರೆ. ಈ  ವೇಳೆ ಅವರಿಗೆ ಪರಿಚಯಸ್ಥರಾದ ಬಿಸಿರೋಡ್ ಅಜ್ಜಿಬೆಟ್ಟುವಿನ ಪ್ರದೀಪ್, ಪುಷ್ಪರಾಜ್ ಅಲೆತ್ತೂರು, ಶರಣ್ ಕೈಕಂಬ, ವಸಂತ ಕಾಮಾಜೆ, ರಾಕೇಶ್,ಅಶ್ವತ್ಥ್  ಹಾಗೂ ಇತರೆ ನಾಲ್ಕೈದು ಜನ  ರು ಎರಡು ಕಾರುಗಳಲ್ಲಿ ಹಾಗೂ ಒಂದು ಬೈಕ್ ನಲ್ಲಿ ಬಂದಿದ್ದಾರೆ. ಹಾಗೇ ಬಂದವರು  ಹರೀಶ್ ರನ್ನು ತಡೆದು, ಅವ್ಯಾಚವಾಗಿ ನಿಂದಿಸಿದ್ದಾರೆ. ಇದಕ್ಕೆ  ಹರೀಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಆಗ ಹರೀಶ್ ಕಿರುಚಾಡಿದ್ದಾರೆ. ಹರೀಶ್ ಕಿರುಚಿದ್ದನ್ನು ಕೇಳಿಸಿಕೊಂಡ ಅವರ ಪರಿಚಯದ ಕೀರ್ತನ್, ಪೃಥ್ವಿರಾಜ್ ಮತ್ತು ವಿನೀತ್ ಅಲ್ಲಿಗೆ ಓಡಿ ಬಂದು ಹಲ್ಲೆ ನಡೆಸುತ್ತಿದ್ದುದನ್ನು ತಡೆಯಲು ಯತ್ನಿಸಿದ್ದಾರೆ. ಆಗ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಅಶ್ವತ್ಥ ಎಂಬಾತ ವಿನೀತ್ ಗೆ ಚೂರಿಯಿಂದ ಇರಿದಿದ್ದು, ಶರಣ್ ಎಂಬಾತ ಪೃಥ್ವಿರಾಜ್ ಎಂಬವರಿಗೆ ಚೂರಿಯಿಂದ ಇರಿದಿದ್ದಾನೆ.ಸಾರ್ವಜನಿಕರು ಹಾಗೂ ಪರಿಚಿತರು ಸೇರುವುದನ್ನು ಗಮನಿಸಿದ ತಂಡ ಹಲ್ಲೆ ನಡೆಸಿದ ತಂಡ ಸ್ಥಳದಿಂದ ಎಸ್ಕೇಪ್ ಆಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಹರೀಶ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!