Wednesday, June 3, 2026
Homeಕರಾವಳಿಮಂಗಳೂರುಮಂಗಳೂರು:  ಬಾರ್ ನಲ್ಲಿ ಯುವಕರ ಗುಂಪಿನ ನಡುವೆ ಮಾರಾಮಾರಿ

ಮಂಗಳೂರು:  ಬಾರ್ ನಲ್ಲಿ ಯುವಕರ ಗುಂಪಿನ ನಡುವೆ ಮಾರಾಮಾರಿ

- Advertisement -
- Advertisement -

ಮಂಗಳೂರು:  ಬಾರ್ ನಲ್ಲಿ ಯುವಕರ ಗುಂಪಿನ ನಡುವೆ ಮಾರಾಮಾರಿ ನಡೆದಿರುವ ಘಟನೆ  ಸುರತ್ಕಲ್ ಸಮೀಪ  ಬಾರ್ ನಲ್ಲಿ ನಡೆದಿದೆ.  ರಫೀಕ್ ಹಾಗೂ ರೋಶನ್, ಸಂದೇಶ್ ಎಂಬವರ ಮಧ್ಯೆ ಕೈಕಂಬ ಕಾರ್ಗೋಗೇಟ್ ಬಳಿಯಿರುವ ಆರೆಂಜ್ ಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ.

ರೋಶನ್ ತಂಡ ಪೊಡಿಯೆಟ್ಟಿ ಯಾನೆ ರಫೀಕ್ ಗೆ ಹಲ್ಲೆ ನಡೆಸಿದ್ದಾರೆ. ಇದೇ ಕಾರಣಕ್ಕೆ ರೋಶನ್ ಸಹೋದರ ವಿಶ್ವ ಹಾಗೂ ಗಿರೀಶ್ ಎಂಬವರು ಅದೇ ಬಾರಿನಲ್ಲಿದ್ದ ಸಂದರ್ಭ ಭಜರಂಗದಳದ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ ಜೊತೆ ಕೃಷ್ಣ ಶೆಟ್ಟಿ ಕೃಷ್ಣಾಪುರ, ನಿತೀನ್ ಹಾಗೂ ಇತರರು ಆಗಮಿಸಿ ಹಲ್ಲೆ ನಡೆಸಿದ್ದಾರೆ.

ಮುಸ್ಲಿಂ ವ್ಯಕ್ತಿ ರಫೀಕ್ ಗೆ ಹಲ್ಲೆ ನಡೆಸಿದ್ದಕ್ಕೆ ಸಂಘಟನೆಯ ಕಾರ್ಯಕರ್ತರು ಎಂಟ್ರಿಕೊಟ್ಟು ಹಿಂದೂಗಳ ಮಧ್ಯೆಯೇ ಮಾರಾಮಾರಿ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಇನ್ನು ಆರೋಪಿ  ಕಾರ್ತಿಕ್ ಶೆಟ್ಟಿ ವಿರುದ್ಧ ದರೋಡೆ ಹಾಗೂ ಹಲವು ಪ್ರಕರಣಗಳು ಈ ಹಿಂದೆಯೇ ದಾಖಲಾಗಿವೆ ಎನ್ನಲಾಗಿದೆ.

- Advertisement -

Latest News

error: Content is protected !!