Wednesday, June 24, 2026
Homeಕರಾವಳಿಕೇಪು ಸರ್ಕಾರಿ ಶಾಲೆಯ ಇಕೋ ಕ್ಲಬ್ ವತಿಯಿಂದ ಫೆ.06 ರಂದು ಕ್ಷೇತ್ರ ದರ್ಶನ ಕಾರ್ಯಕ್ರಮ

ಕೇಪು ಸರ್ಕಾರಿ ಶಾಲೆಯ ಇಕೋ ಕ್ಲಬ್ ವತಿಯಿಂದ ಫೆ.06 ರಂದು ಕ್ಷೇತ್ರ ದರ್ಶನ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಸರ್ಕಾರಿ ಪ್ರೌಢಶಾಲೆ ಕಲ್ಲಂಗಳ ಕೇಪುವಿನ ಇಕೋ ಕ್ಲಬ್ ವತಿಯಿಂದ ಫೆ.06 ಬುಧವಾರದಂದು ಕ್ಷೇತ್ರ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸುಧಾಕರ್ ಪೂಜಾರಿ ಬಡೆಕೋಡಿ ಇವರ ಜೇನು ಕೃಷಿಕೇಂದ್ರಕ್ಕೆ

8 ಹಾಗೂ 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳೊಂದಿಗೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಭೇಟಿ ನೀಡಿದರು. ಮಕ್ಕಳು ಜೇನು ಕೃಷಿಯ ಹಾಗೂ ಹಲವಾರು ಪರಿಸರದ ಸಮತೋಲನದ ಬಗ್ಗೆ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ರಾಧಾಕೃಷ್ಣ ಇವರಿಂದ ಮಾಹಿತಿಯನ್ನು ಪಡೆದರು.

ರೋಟರಿ ಕ್ಲಬ್ ವಿಟ್ಲ ಇದರ ಪದಾಧಿಕಾರಿಗಳಾದ ಜೈ ಕಿಶನ್ ಹಾಗೂ ಸಂಜೀವ ಪೂಜಾರಿ ಅವರು ಅತಿಥಿಗಳಾಗಿ ಆಗಮಿಸಿದ್ದರು ಶ್ರೀಮತಿ ಹರಿಣಾಕ್ಷಿ ಸುಧಾಕ‌ರ್ ಅವರ ವಿಶೇಷ ಸಹಕಾರದೊಂದಿಗೆ ಕಾರ್ಯಕ್ರಮವನ್ನು

ಆಯೋಜಿಸಲಾಗಿತ್ತು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಮಾಲತಿ.ಕೆ ಇವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಶ್ರೀಮತಿ ಪೂರ್ಣಿಮಾ ಮತ್ತು ಶಾಂತಲ, ಇಕೋಕ್ಲಬ್ ನೋಡೆಲ್ ಶಿಕ್ಷಕ ಲಕ್ಷ್ಮಣ ಟಿ.ನಾಯ್ಕ, ಶಿಕ್ಷಕ ಶ್ರೀ ರಮೇಶ ಡಿಯವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!