Monday, April 29, 2024
Homeಉದ್ಯಮಗಮನಿಸಿ: ಜೂನ್ 1ರಿಂದ ಬದಲಾಗಲಿದೆ ಈ ಎಲ್ಲ ನಿಯಮ

ಗಮನಿಸಿ: ಜೂನ್ 1ರಿಂದ ಬದಲಾಗಲಿದೆ ಈ ಎಲ್ಲ ನಿಯಮ

spot_img
- Advertisement -
- Advertisement -

ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಜೂನ್ 1 ರಿಂದ ಬದಲಾಗಲಿವೆ. ರೈಲ್ವೆ, ಬಸ್ಸುಗಳು, ಪಡಿತರ ಚೀಟಿಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನು ಇದು ಒಳಗೊಂಡಿದೆ. ಇದರಲ್ಲಿ ಲಾಕ್‌ಡೌನ್ ನಂತರ ಅನೇಕ ವಿಷಯಗಳು ಸೇರಿವೆ. ಜೂನ್ ಒಂದರಿಂದ ಅನೇಕ ವಸ್ತುಗಳು ಅಗ್ಗವಾದ್ರೆ ಮತ್ತೆ ಕೆಲ ವಸ್ತುಗಳು, ಸೇವೆಗಳು ದುಬಾರಿಯಾಗಲಿವೆ.

ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಬಿದ್ದ ಜನರ ನೆರವಿಗಾಗಿ ಭಾರತೀಯ ರೈಲ್ವೆ ಜೂನ್ 1 ರಿಂದ 200 ಹೆಚ್ಚುವರಿ ರೈಲುಗಳನ್ನು ಓಡಿಸಲಿದೆ. ಈ 200 ರೈಲುಗಳು ನಾನ್ ಎಸಿ ಆಗಿರಲಿವೆ. ಈ ರೈಲುಗಳ ಬುಕಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಯೋಜನೆ ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಮುಂದಿನ ಜೂನ್ 1 ರಿಂದ ದೇಶದ 20 ರಾಜ್ಯಗಳಲ್ಲಿ ಜಾರಿಗೆ ತರಲಿದೆ. ಇದರ ನಂತರ ಈ 20 ರಾಜ್ಯಗಳಲ್ಲಿ ಪಡಿತರ ಚೀಟಿ ಹೊಂದಿರುವವರು ಯಾವುದೇ ರಾಜ್ಯದ ಸರ್ಕಾರಿ ಪಡಿತರ ಕೇಂದ್ರದಿಂದ ಪಡಿತರವನ್ನು ಖರೀದಿಸಲು ಸಾಧ್ಯವಾಗುತ್ತದೆ.

ಸರ್ಕಾರದ ಸೂಚನೆಗಳು ಮತ್ತು ನಿಯಮಗಳನ್ನು ಅನುಸರಿಸಿ ಬಜೆಟ್ ವಿಮಾನ ಗೋಏರ್ ಜೂನ್ 1 ರಿಂದ ತನ್ನ ದೇಶೀಯ ವಿಮಾನಯಾನಗಳನ್ನು ಪ್ರಾರಂಭಿಸಲಿದೆ.

ಜೂನ್ 1ರಿಂದ ಲಾಕ್ ಡೌನ್ ಸಡಿಲವಾಗುವ ಸಾಧ್ಯತೆಯಿದ್ದು, ವಾಹನಗಳ ಓಡಾಟ ಹೆಚ್ಚಾಗಲಿದೆ. ಹಾಗಾಗಿ ಪೆಟ್ರೋಲ್, ಡಿಸೇಲ್ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.

- Advertisement -
spot_img

Latest News

error: Content is protected !!