Friday, May 17, 2024
Homeಅಪರಾಧತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ; 5 ವರ್ಷದ ಮಗಳನ್ನು ಕೊಲ್ಲಲು ಯತ್ನಿಸಿದ ಪಾಪಿ ತಂದೆ

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ; 5 ವರ್ಷದ ಮಗಳನ್ನು ಕೊಲ್ಲಲು ಯತ್ನಿಸಿದ ಪಾಪಿ ತಂದೆ

spot_img
- Advertisement -
- Advertisement -

ಮುಂಬೈ: ತಂದೆಯೇ 5 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ, ಅವಳನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ಮಹಾರಾಷ್ಟ್ರದ ಪುಣಾದಲ್ಲಿ ನಡೆದಿದೆ.

32 ವರ್ಷದ ವ್ಯಕ್ತಿ ಈ ಪ್ರಕರಣದ ಆರೋಪಿ. ಮಗಳ ಮೇಲಿನ ಅತ್ಯಾಚಾರವನ್ನು ಆತನ ಪತ್ನಿ ವಿರೋಧಿಸಿದ್ದಳು. ಅಷ್ಟೇ ಅಲ್ಲದೇ ಈ ವಿಚಾರಕ್ಕೆ ಪತಿ, ಪತ್ನಿ ನಡುವೆ ವಾಗ್ವಾದವು ನಡೆದಿದ್ದು, ಇದು ಮಿತಿಮೀರಿದಾಗ ಆತ ಕೋಪಗೊಂಡು ತನ್ನ 5 ವರ್ಷದ ಮಗಳನ್ನು ನೆಲದ ಮೇಲೆ ದೂಡಿ, ಬೆಲ್‌ಟ್‌ನಿಂದ ಅವಳ ಕತ್ತು ಹಿಸುಕಲು ಯತ್ನಿಸಿದ್ದಾನೆ.

ಆದರೆ ಈ ಸಂದರ್ಭದಲ್ಲಿ ಪತ್ನಿ ಮಧ್ಯಪ್ರವೇಶಿಸಿ ಬಾಲಕಿಯನ್ನು ರಕ್ಷಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆತನ ಪತ್ನಿ ಪಿಂಪ್ರಿ ಚಿಂಚ್‌ವಾಡ್ ಪೊಲೀಸರಿಗೆ ದೂರು ನೀಡಿದ್ದು, ಘಟನೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಲಾಗಿದೆ.

- Advertisement -
spot_img

Latest News

error: Content is protected !!