Wednesday, June 3, 2026
Homeಕರಾವಳಿಉಡುಪಿಮಕ್ಕಳಿಗೆ ಈಜು ಕಲಿಸಲು ಹೋದ ತಂದೆ ನೀರುಪಾಲು

ಮಕ್ಕಳಿಗೆ ಈಜು ಕಲಿಸಲು ಹೋದ ತಂದೆ ನೀರುಪಾಲು

- Advertisement -
- Advertisement -

ಉಪ್ಪಿನಂಗಡಿ: ಇಂಗು ಗುಂಡಿಯಲ್ಲಿ ಈಜು ಕಲಿಸುತ್ತೇನೆ ಎಂದು ಮಕ್ಕಳನ್ನು ಕರೆದುಕೊಂಡು ಹೋಗಿದ್ದ ತಂದೆಯೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗೋಳಿತೊಟ್ಟು ಗ್ರಾಮದ ನಾಯಿಲ ಎಂಬಲ್ಲಿ ಸಂಭವಿಸಿದೆ.

ಮೃತರನ್ನು ಗೋಳಿತೊಟ್ಟು ಗ್ರಾಮದ ಹರೀಶ್ ಪೂಜಾರಿ (38) ಎಂದು ಗುರುತಿಸಲಾಗಿದೆ. ಇವರು ತನ್ನ ಮನೆ ಸಮೀಪದ ಗೇರು ನಿಗಮದ ಭೂಮಿಯಲ್ಲಿ ನಿರ್ಮಿಸಿದ್ದ ಇಂಗು ಗುಂಡಿಯಲ್ಲಿ ತನ್ನ ಮಕ್ಕಳಿಗೆ ಈಜು ಕಲಿಸಲೆಂದು ಹೋದವರು, ನೀರಿನಲ್ಲಿ ಮುಳುಗಿ ಅಸ್ವಸ್ಥರಾದರು.

ಕೂಡಲೇ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟರೆಂದು ತಿಳಿದು ಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!