Saturday, June 13, 2026
Homeಕರಾವಳಿಉಡುಪಿಉಡುಪಿಯಲ್ಲಿ ಒಂದೇ ದಿನ ತಂದೆ ಮಗ ಸಾವು

ಉಡುಪಿಯಲ್ಲಿ ಒಂದೇ ದಿನ ತಂದೆ ಮಗ ಸಾವು

- Advertisement -
- Advertisement -

ಉಡುಪಿ; ಒಂದೇ ದಿನ ಒಂದೇ‌ ಮನೆಯಲ್ಲಿ ವಾಸವಾಗಿದ್ದ ತಂದೆ ಮತ್ತು ಮಗ ಮೃತಪಟ್ಟ ಅಪರೂಪದ ನೋವಿನ ಘಟನೆ ನಡೆದಿದೆ.ಪಡುಬಿದ್ರಿ ಕಂಚಿನಡ್ಕದ ಸಂಜೀವ(72) ಹಾಗೂ ಅವರ ಪುತ್ರ ಉದಯ (45) ಮೃತ ದುರ್ದೈವಿಗಳು.

ಸಂಜೀವ ಹಾಗೂ ಉದಯ್ ಅವರು ಚಾಲಕರಾಗಿ ಕೆಲಸ ಮಾಡುತ್ತಿದ್ದರು.ಸಂಜೀವ ಅವರು 40 ವರ್ಷ ಹಾಗೂ ಉದಯ 20 ವರ್ಷ ಚಾಲಕರಾಗಿ ಕೆಲಸ ನಿರ್ವಹಿಸಿದ್ದರು. ಇನ್ನು ಸಂಜೀವ್ ಅವರು ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರು.

ಉದಯ ಕೆಲವು ದಿನಗಳ ಹಿಂದೆ ಜ್ವರದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಿಧನರಾಗಿದ್ದರು. ಅವರ ಅಂತ್ಯ ಸಂಸ್ಕಾರ ಪೂರ್ಣಗೊಂಡ ಬಳಿಕ ಹಾಸಿಗೆ ಹಿಡಿದಿದ್ದ ಸಂಜೀವ ಅವರೂ ಸಾವನ್ನಪ್ಪಿದ್ದಾರೆ‌.ಬಡತನದಲ್ಲಿ ಜೀವಿಸುತ್ತಿದ್ದ ಈ ಕುಟುಂಬಕ್ಕೆ ಇಬ್ಬರ ಅಗಲಿಕೆ ದೊಡ್ಡ ಆಘಾತವನ್ನು ನೀಡಿದೆ.

- Advertisement -

Latest News

error: Content is protected !!