Thursday, June 4, 2026
Homeಕರಾವಳಿಧರ್ಮಸ್ಥಳ; ಮನೆಯ ಸಮೀಪವಿದ್ದ ದನದ  ಹಟ್ಟಿಗೆ ನುಗ್ಗಿ ದನವನ್ನು ಕೊಂದು ತಿಂದ ಚಿರತೆ

ಧರ್ಮಸ್ಥಳ; ಮನೆಯ ಸಮೀಪವಿದ್ದ ದನದ  ಹಟ್ಟಿಗೆ ನುಗ್ಗಿ ದನವನ್ನು ಕೊಂದು ತಿಂದ ಚಿರತೆ

- Advertisement -
- Advertisement -

ಧರ್ಮಸ್ಥಳ; ಮನೆಯ ಸಮೀಪವಿದ್ದ ದನದ  ಹಟ್ಟಿಗೆ ನುಗ್ಗಿದ ಚಿರತೆ ಕಟ್ಟಿ ಹಾಕಿದ್ದ ದನವೊಂದನ್ನು ಕೊಂದು ತಿಂದ ಘಟನೆ ಇಂದು ಬೆಳಿಗ್ಗೆ ಧರ್ಮಸ್ಥಳ ಗ್ರಾಮದ ನೇರ್ತನೆಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ನಿವಾಸಿಯಾಗಿರುವ ತ್ರೇಸ್ಯಾಮ್ಮ ಪಿ ಕೆ ಎಂಬವರ ಮನೆಯ ಸಮೀಪದ ಹಟ್ಟಿಯಲ್ಲಿದ್ದ ದನವನ್ನು ರಾತ್ರಿಯ ವೇಳೆ ಹಟ್ಟಿಗೆ ನುಗ್ಗಿದ ಚಿರತೆ ಕೊಂದು ತಿಂದಿದೆ. ನೇರ್ತನೆಯಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಆನೆಗಳ ಹಾವಳಿ ತುಂಬಾ ಹೆಚ್ಚಾಗಿದೆ. ಕೃಷಿಕರು ಆತಂಕದಲ್ಲಿಯೇ ಬದುಕಬೇಕಾದ ಸ್ಥಿತಿ ಎದುರಾಗಿದೆ.

ತ್ರೇಸ್ಯಾಮ್ಮ ಅವರ ಮನೆ ಅರಣ್ಯದ ಸಮೀಪವೇ ಇದೆ ಆಶಾ ಕಾರ್ಯಕರ್ತೆಯಾದ ಇವರು ಅತಿ ಸಣ್ಣ ಕೃಷಿಕರಾಗಿದ್ದು ಹೈನುಗಾರಿಯೇ ಇವರಿಗೆ ಜೀವನೋಪಾಯವಾಗಿತ್ತು‌. ಕಳೆದ ಕೆಲ ದಿನಗಳ ಹಿಂದೆ ಈ ಪರಿಸರದಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು ಅದರ ಬಳಿಕ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಎಂದು ಇಲ್ಲಿನ ಜನರು ಮಾಹಿತಿ ನೀಡುತ್ತಿದ್ದಾರೆ.

ಮುಂಡಾಜೆ ದುಂಬೆಟ್ಟು ಪರಿಸರದಲ್ಲಿ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊ‌ಡು ನಾಯಿಗಳನ್ನು ತಿಂದು ಹಾಕಿತ್ತು. ಆ ಪರಿಸರದಿಂದ ಚಿರತೆ ಇಲ್ಲಿಗೆ ಬಂದಿರವಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ‌. ಕಾಡುಪ್ರಾಣಿಗಳ ಉಪಟಳದಿಂದಾಗಿ ಸ್ಥಳೀಯ ಜನರು ರಾತ್ರಿಯ ವೇಳೆ ಹಾಗೂ ಬೆಳಗ್ಗಿನ ಜಾವ ಮನೆಗಳಿಂದ ಹೊರ ಬರಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ

- Advertisement -

Latest News

error: Content is protected !!