ಬೆಂಗಳೂರು : ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್ 19 ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿನ ಹೂ, ಹಣ್ಣು ಮತ್ತು ತರಕಾರಿ ಬೆಳೆಗಾರರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ . ಇವರಿಗೆ ನೆರವಾಗಲು ಕರ್ನಾಟಕ ರಾಜ್ಯ ಸರಕಾರ ಮುಂದಾಗಿದೆ. ಕೆಎಂಎಫ್ ಮಳಿಗೆಗಳ ಮೂಲಕ ಹೂ, ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಅವಕಾಶ ಮಾಡುವ ಮೂಲಕ ಶುಭ ವಾರ್ತೆ ನೀಡಿದೆ .
ಈ ಕುರಿತಂತೆ ರಾಜ್ಯದ ತೋಟಗಾರಿಕೆ ಇಲಾಖೆಯ ನಿರ್ದೇಶಕರಾದಂತಹ ಬಿ ವೆಂಕಟೇಶ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈಗಿನ ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗಲು, ರೈತರು ಬೆಳದ ಹೂ, ಹಣ್ಣು ಮತ್ತು ತರಕಾರಿಗಳನ್ನು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ, ಬೆಂಗಳೂರಿನವರ ಸಹಯೋಗದೊಂದಿಗೆ ಕೆಎಂಎಫ್ ಮಳಿಗೆಗಳಲ್ಲಿ ಹೂ, ಹಣ್ಣ ಮತ್ತು ತರಕಾರಿಗಳನ್ನು ನೇರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈ ವ್ಯವಸ್ಥೆಯ ಅನುಕೂಲವನ್ನು ಬೆಳೆಗಾರರು ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ ಮತ್ತು ಹೆಚ್ಚಿನ ಮಾಹಿತಿಗಾಗಿ ಕ್ಷಮಾ ಪಾಟೀಲ್, ತೋಟಗಾರಿಕೆ ಉಪ ನಿರ್ದೇಶಕರು, ಮೊಬೈಲ್ ಸಂಖ್ಯೆ-9480885820 ಅವರನ್ನು ಹಾಗೂ ಸಂಬಂಧಿಸಿದ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರುಗಳನ್ನು ಸಂಪರ್ಕಿಸಲು ಕೋರಿದೆ.