Wednesday, September 18, 2024
Homeಕರಾವಳಿಸರಳಿಕಟ್ಟೆ : 250 ಅರ್ಹ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

ಸರಳಿಕಟ್ಟೆ : 250 ಅರ್ಹ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

spot_img
- Advertisement -
- Advertisement -

ಸರಳಿಕಟ್ಟೆ; ಜಗತ್ತಿನೆಲ್ಲೆಡೆ ಮಹಾಮಾರಿ ಕೋವಿಡ್-19 ಎಂಬ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ರೋಗ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶದಲ್ಲಿ ಸರಕಾರ ಲಾಕ್ ಡೌನ್ ಘೋಷಿಸಿದ್ದು, ತತ್ಪರಿಣಾಮವಾಗಿ ದಿನಗೂಲಿ ನೌಕರರು ಹಾಗೂ ಇತರೆ ಕಾರ್ಮಿಕ ಕುಟುಂಬಗಳು ತೀರಾ ಆರ್ಥಿಕ ಸಂಕಷ್ಟವನ್ನು ಎದುರಿಸುತಿದೆ. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯಸ್ತ ನೀಡುವ ಮಹತ್ತರವಾದ ಸದುದ್ದೇಶದೊಂದಿಗೆ ಬೆಳ್ತಂಗಡಿ ತಾಲೂಕು ಸರಳಿಕಟ್ಟೆ ಜಮಾತ್ ಆಡಳಿತ ಸಮಿತಿ, ಎಸ್.ವೈ.ಎಸ್, ಎಸ್.ಎಸ್.ಎಫ್ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಸರಳಿಕಟ್ಟೆಯ ಅನಿವಾಸಿ ಸಂಘಟನೆ -ಗಲ್ಫ್ ಫ್ರೆಂಡ್ಸ್-ಸರಳಿಕಟ್ಟೆಯ ಸಹಭಾಗಿತ್ವದಲ್ಲಿ “ಹೆಲ್ಪ್ ಲೈನ್” ವಾಟ್ಸಾಪ್ ಗ್ರೂಪ್ ಮೂಲಕ ದಾನಿಗಳಿಂದ ಸಂಗ್ರಹಿಸಿದ ಸುಮಾರು ಮೂರು ಲಕ್ಷದಷ್ಷು ಮೊತ್ತದ ಆಹಾರ ಸಾಮಾಗ್ರಿಗಳನ್ನು, ಸರಳಿಕಟ್ಟೆ ಜಮಾತಿಗೆ ಒಳಪಟ್ಟ 197 ಮುಸ್ಲಿಂ ಮನೆಗಳಿಗೂ ಮತ್ತು ಸರಳಿಕಟ್ಟೆ ಪರಿಸರದಲ್ಲಿ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಹಿಂದೂ ಧರ್ಮೀಯರಿಗೂ ಸೇರಿದಂತೆ ಒಟ್ಟು ಸುಮಾರು 250 ಕುಟುಂಬಗಳಿಗೆ ಪವಿತ್ರ ರಮ್ಝಾನ್ ತಿಂಗಳ ಮೊದಲ ದಿನವೇ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಸರ್ವಧರ್ಮ ಸಮನ್ವಯತೆಯ ಮೂಲಕ ಇತರರಿಗೆ ಮಾದರಿಯಾದರು .

- Advertisement -
spot_img

Latest News

error: Content is protected !!