- Advertisement -
- Advertisement -
ನಾಗಪುರದ ಸಂಘದ ಕೇಂದ್ರ ಕಚೇರಿಯಿಂದ ಆನ್‌ಲೈನ್ ಮೂಲಕ ದೇಶಾದ್ಯಂತ ಇರುವ ಸ್ವಯಂಸೇವಕರು ಹಾಗು ಹಿತೈಷಿಗಳು ಮತ್ತು ಅವರ ಕುಟುಂಬದವರನ್ನು ಉದ್ದೇಶಿಸಿ ಮಾತನಾಡಿದ ಸರಸಂಘಚಾಲಕರು “ವರ್ತಮಾನ ಸನ್ನಿವೇಶದಲ್ಲಿ ನಮ್ಮ ಪಾತ್ರ” ಕುರಿತು ಸ್ವಯಂಸೇವಕರು ಹಾಗೂ ಸಮಾಜ ಬಂಧುಗಳಿಗೆ ಮಾರ್ಗದರ್ಶನ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಅವರ ಆನ್‌ಲೈನ್ ಬೌದ್ಧಿಕ ವರ್ಗದ ಪ್ರಮುಖ ಅಂಶಗಳು
- ಶಾಖೆಗಳು ಇಂದು ಸಮಾಜದ ಮಧ್ಯದಲ್ಲಿ ನಡೆಯದಿದ್ದರೂ ಮನೆಗಳಲ್ಲಿ ಎಲ್ಲ ಸ್ವಯಂಸೇವಕರು ಪ್ರತಿನಿತ್ಯ ಪ್ರಾರ್ಥನೆ ಮಾಡುತ್ತಿದ್ದಾರೆ.
- ಸೇವಾ ಕಾರ್ಯದ ಕಾರ್ಯರೂಪ ಬದಲಾಗಿದೆ. ಸ್ವಯಂಸೇವಕರು ಸೇವೆಯೆನ್ನು ಮಾಡುತ್ತಾ ಅಹಂಕಾರ, ಸ್ವಾರ್ಥಗಳನ್ನು ತ್ಯಜಿಸಬೇಕಾದ ಸಮಯ ಇದು.
- ಲಾಕ್ ಡೌನ್/ ಸಾಮಾಜಿಕ ಅಂತರ ವಿಷಯಗಳಲ್ಲಿ ಸ್ವಯಂಸೇವಕರು ಸಮಾಜಕ್ಕೆ ಮಾಡರಿಯಾಗಬೇಕು. ಸೇವೆಯನ್ನು ಮಾಡುವಾಗ ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು.
- ನಮ್ಮದು ಉಪಕಾರವಲ್ಲ, ಸೇವೆ. ಇದು ನಿರಂತರ. ಸೇವೆಯಲ್ಲಿ ಸಾರ್ಥಕ್ಯ ಇರಲಿ. ತೋರಿಕೆ ಬೇಡ. ಹನುಮನ ರೀತಿಯಲ್ಲಿ ನಮ್ಮ ಸೇವೆ ಇರಲಿ.
- ಭಾರತವು ಇಂದು ಜಗತ್ತಿಗೆ ಔಷಧವನ್ನು ರಫ್ತು ಮಾಡಿ ಜಗತ್ತಿನ ಏಳ್ಗೆಗಾಗಿ ಶ್ರಮಿಸುತ್ತಿದೆ.
- ಸೇವೆಯಲ್ಲಿ ತಾಳ್ಮೆ ಮುಖ್ಯ. ಎಲ್ಲಿಯವರೆಗೆ ಸೇವೆ ಅಗತ್ಯವೋ ಅಲ್ಲಿಯವರೆಗೆ ತಾಳ್ಮೆ ಕಳೆದುಕೊಳ್ಳದೇ ಸೇವೆಯನ್ನು ಮಾಡುವುದು ನಮ್ಮ ಜವಾಬ್ದಾರಿ. ನಿದ್ರೆ, ವಿಚಲನ, ಭಯ, ಕೋಪ, ಆಲಸ್ಯ ಇವೆಲ್ಲವನ್ನೂ ಬಿಟ್ಟು ಸೇವೆ ಮಾಡೋಣ.
- ನಮ್ಮ ಸೇವೆಯಲ್ಲೂ ದೋಷ ನೋಡುವವರು ಇರುತ್ತಾರೆ. ಆಗ ಕೋಪಿಸಿಕೊಳ್ಳದೇ, ಬೇಸರ ಮಾಡಿಕೊಳ್ಳದೇ ನಮ್ಮ ಕೆಲಸ ಮುಂದುವರೆಸೋಣ. ಯಾರೊಂದಿಗೂ ವಿರೋಧ ಬೇಡ. ಎಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಭಾವನೆ ಇರಲಿ.
- ಸಾಮಾಜಿಕ ಅಂತರವನ್ನು ಗಮನವಿಟ್ಟುಕೊಂಡು ಮಾರ್ಕೆಟ್, ಈ-ಕ್ಲಾಸ್ ಗಳು ನಡೆಸಬಹುದೇ? ಎಂದು ಯೋಚಿಸುವ ಅಗತ್ಯ ಇದೆ.
- ಕುಟುಂಬಗಳಲ್ಲಿ ಭಯವಿಲ್ಲದ ವಾತಾವರಣವನ್ನು ನಿರ್ಮಿಸುವುದು ಸ್ವಯಂಸೇವಕ ಜವಾಬ್ದಾರಿ.
- ಶತ ಶತಮಾನಗಳಲ್ಲಿ ಇಂತಹ ಸಂಕಷ್ಟ ಬಂದಿರುವುದು ಇದೇ ಮೊದಲು. ಇದರಿಂದ ಕಲಿಯುವ ಅಂಶಗಳೂ ಇವೆ.
- ಗ್ರಾಮಗಳು ಸ್ವಾವಲಂಬಿ ಆಗಲು ಇದು ಉತ್ತಮ ಅವಕಾಶ. ಸ್ವಯಂ ಆಧಾರಿತ ಕೆಲಸಗಳನ್ನು ಈ ದೇಶದ ಯುವಕರು ಪ್ರಾರಂಭಿಸಬೇಕು. ಆಧುನಿಕ ವಿಜ್ಞಾನವನ್ನು ಈ ನಿಟ್ಟಿನಲ್ಲಿ ಬಳಸಿಕೊಳ್ಳಬೇಕು. ಇದು ಸರ್ಕಾರದ ಕೆಲಸವಷ್ಟೇ ಅಲ್ಲ. ಸಮಾಜದ ಕಾರ್ಯ.
- ಕೊರೋನಾದಿಂದ ಇಂದು ಪರಿಸರ ಮಾಲಿನ್ಯ ರಹಿತವಾಗಿರುವುದನ್ನು ನೋಡಬಹುದು. ಸಮಸ್ಯೆಯ ಪರಿಹಾರವಾದ ಮೇಲೆ ಅದನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುವುದು ಸಮಾಜದ ಹೊಣೆ.
ಹೀಗೆ, ಆತ್ಮವಿಶ್ವಾಸದಿಂದ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದೇಶದ ಎಲ್ಲರೂ ಸರ್ಕಾರದ ಅನುಶಾಸನವನ್ನು ಪಾಲಿಸುತ್ತಾ ಈ ಮಹಾಮಾರಿಯ ವಿರುದ್ಧ ಜಯಗಳಿಸೋಣ.
- Advertisement -