Wednesday, June 3, 2026
Homeಕರಾವಳಿಮಂಗಳೂರುಕಡಬ: ಕಾನಜೆ ಕಾಯಿ ಕೊಯ್ಯಲೆಂದು ತೋಟಕ್ಕೆ ಹೋಗಿದ್ದ  ಕೃಷಿಕ ಹೃದಯಾಘಾತವಾಗಿ ಸಾವು

ಕಡಬ: ಕಾನಜೆ ಕಾಯಿ ಕೊಯ್ಯಲೆಂದು ತೋಟಕ್ಕೆ ಹೋಗಿದ್ದ  ಕೃಷಿಕ ಹೃದಯಾಘಾತವಾಗಿ ಸಾವು

- Advertisement -
- Advertisement -

ಕಡಬ: ಕಾನಜೆ ಕಾಯಿ ಕೊಯ್ಯಲೆಂದು ತೋಟಕ್ಕೆ ಹೋಗಿದ್ದ ಕೃಷಿಕ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಕಡಬ ಗ್ರಾಮದ  ಅಲುಂಗೂರು ತಿಮರಡ್ಡಿ ಎಂಬಲ್ಲಿ ಜ.22  ಬುಧವಾರ ನಡೆದಿದೆ. ಬಜನಿಗುತ್ತು ಗಣೇಶ್‌ ರೈ (55)  ಮೃತ ಕೃಷಿಕ.

ಗಣೇಶ್ ರೈ ಅವರು ಕಾನಜೆ ಕಾಯಿ ಕೊಯ್ಯಲೆಂದು ತೋಟಕ್ಕೆ ಹೋಗಿದ್ದರು. ಬೆಳಿಗ್ಗೆ ಹೋದವರು ಮಧ್ಯಾಹ್ನವಾದರೂ ಬಾರದೆ ಇದ್ದುದ್ದನ್ನು ಕಂಡು ಮನೆ ಮಂದಿ ಹುಡುಕಾಡಿದಾಗ ತೋಟದಲ್ಲಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಮನೆಮಂದಿ ಕಡಬ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ಹೃದಯಾಘಾತದಿಂದ ಮೃತ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!