Friday, June 5, 2026
Homeಕರಾವಳಿಉಡುಪಿಉಡುಪಿ: ಏಣಿಯಿಂದ ಬಿದ್ದು ಕೃಷಿಕ ಸಾವು

ಉಡುಪಿ: ಏಣಿಯಿಂದ ಬಿದ್ದು ಕೃಷಿಕ ಸಾವು

- Advertisement -
- Advertisement -

ಉಡುಪಿ: ಸಂತೆಕಟ್ಟೆಯ ಗೋಪಾಲಪುರದಲ್ಲಿ ಏಣಿಯಿಂದ ಬಿದ್ದು ಕೃಷಿಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಸ್ಟ್ಯಾನಿ ರೆಬೆಲ್ಲೋ (71) ಎಂದು ಗುರುತಿಸಲಾಗಿದೆ.

ಸ್ಟ್ಯಾನಿ ಅವರ ಪುತ್ರ ನಿಷ್ಯಲ್ ರೆಬೆಲ್ಲೊ ನೀಡಿದ ದೂರಿನ ಪ್ರಕಾರ, “ಅಡಿಕೆ ಮರಕ್ಕೆ ಹಬ್ಬಿಸಿದ ಕಾಳು ಮೆಣಸನ್ನು ಏಣಿಯ ಮುಖೇನ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಕೆಳಗೆ ಬಿದ್ದು, ತಲೆಯ ಹಿಂಬದಿಗೆ ಗಂಭೀರ ಸ್ವರೂಪದ ಗಾಯವಾಗಿ ಕೂಡಲೇ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದಿದ್ದೇವೆ ಆದರೆ ವೈದ್ಯರು ಪರೀಕ್ಷಿಸಿ ಸ್ಯಾನಿ ರೆಬೆಲ್ಲೋ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ” ಎಂದರು.

ಇನ್ನು ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!