Thursday, June 4, 2026
Homeಕರಾವಳಿಕಡಬ; ಸಾಲ ತೀರಿಸಲಾಗದೆ ಹಿರಿಯ ಕೃಷಿ ಆತ್ಮಹತ್ಯೆಗೆ ಶರಣು

ಕಡಬ; ಸಾಲ ತೀರಿಸಲಾಗದೆ ಹಿರಿಯ ಕೃಷಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಕಡಬ; ಸಾಲ ತೀರಿಸಲಾಗದೆ ಹಿರಿಯ ಕೃಷಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಬುಡಲೂರು ಎಂಬಲ್ಲಿ ನಡೆದಿದೆ. ಬೂಡಲೂರು ನಿವಾಸಿ ಶಿವಣ್ಣ ಗೌಡ(61)ಆತ್ಮಹತ್ಯೆ ಮಾಡಿಕೊಂಡ ಕೃಷಿಕ.

ಶಿವಣ್ಣ ಗೌಡ ತಮ್ಮ ಮನೆಯ ಸಮೀಪದ ಗುಡ್ಡೆಯೊಂದರಲ್ಲಿ ಶಿವಣ್ಣ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಣ್ಣ ಗೌಡ ಅವರು ಸ್ಥಳೀಯ ಸಹಕಾರಿ ಕೃಷಿ ಪತ್ತಿನ ಸಹಕಾರಿ ಸಂಘ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ಕೃಷಿ ಚಟುವಟಿಕೆಗಾಗಿ ರೂ.10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗಿನಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪುತ್ರ ಹೇಮಂತ್ ಅವರು ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!