Friday, June 5, 2026
Homeಕರಾವಳಿಉಡುಪಿಉಡುಪಿ: ಖ್ಯಾತ ವಯಲಿನ್ ವಾದಕಿ ವಿದುಷಿ ವಸಂತಿ ರಾಮ ಭಟ್ ನಿಧನ

ಉಡುಪಿ: ಖ್ಯಾತ ವಯಲಿನ್ ವಾದಕಿ ವಿದುಷಿ ವಸಂತಿ ರಾಮ ಭಟ್ ನಿಧನ

- Advertisement -
- Advertisement -

ಉಡುಪಿ : ಹೆಸರಾಂತ ಸಂಗೀತ ವಿದುಷಿ ವಸಂತಿ ರಾಮ ಭಟ್ ನಿಧನರಾಗಿದ್ದಾರೆ. ಇವರು ಎಂ.ಜಿ.ಎಂ.ಕಾಲೇಜಿನ ಪ್ರಾಂಶುಪಾಲರಾಗಿದ್ದ ದಿ.ಪ್ರೊ. ರಾಮ ಭಟ್ ಅವರ ಧರ್ಮಪತ್ನಿ. ಉಡುಪಿಯಲ್ಲಿ ವಯಲಿನ್ ವಾದನದಲ್ಲಿ ಹೆಸರುವಾಸಿಯಾಗಿದ್ದರು.

ಇವರು ರಾಗಧನ ಸಂಸ್ಥೆಯ ಸಕ್ರಿಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿದ್ದು, ಹಲವಾರು ಸಂಗೀತಗಾರರಿಗೆ ಸಾಥ್ ನೀಡಿದ ಉಡುಪಿಯ ಹೆಮ್ಮೆಯ ಕಲಾವಿದೆ.

ಅಲ್ಲದೆ ನೂರಾರು ಶಿಷ್ಯರಿಗೆ ವಯಲಿನ್ ತರಬೇತಿ ನೀಡಿದ್ದಾರೆ. ತಾಯಿಯ ತಂದೆ ಪಿಡ್ಡು ಕೃಷ್ಣರಾಯರು ಹಾಗೂ ಉಡುಪಿ ಲಕ್ಷ್ಮೀ ಬಾಯಿ ಇವರ ಸಂಗೀತ ಗುರುಗಳು, ತಮ್ಮ ಗುರುಗಳ ಹೆಸರಲ್ಲಿ ನಿರಂತರ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು. ಉತ್ತಮ ಟೆನಿಸ್ ಚಾಂಪಿಯನ್ ಕೂಡ ಆಗಿದ್ದರು.

- Advertisement -

Latest News

error: Content is protected !!