Tuesday, May 7, 2024
Homeಕರಾವಳಿಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಸುದ್ದಿಗಳ ಪ್ರಸಾರದ...

ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಸುದ್ದಿಗಳ ಪ್ರಸಾರದ ಬಗ್ಗೆ ಪೋಲೀಸರಿಗೆ ದೂರು ಸಲ್ಲಿಕೆ

spot_img
- Advertisement -
- Advertisement -

ಉಡುಪಿ: ಕೆಲವು ದಿನಗಳ ಹಿಂದೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರ ಬಗ್ಗೆ ಅವರ ಘನತೆಗೆ ಧಕ್ಕೆ ಬರುವಂತೆ ಅವಹೇಳನಕಾರಿ ಸುದ್ದಿಯನ್ನು ವಾಟ್ಸಪ್ ಸೋಷಿಯಲ್ ಮೀಡಿಯಾ ಮುಖಾಂತರ ಯಾರೋ ವಿಕೃತ ಮನಸ್ಸಿನ ವ್ಯಕ್ತಿ ವೈರಲ್. ಈ ಬಗ್ಗೆ ವಿಶ್ವದಾದ್ಯಂತ ಇರುವ ಎಲ್ಲಾ ಬಂಟರ ಸಂಘದ ಅಧ್ಯಕ್ಷರುಗಳು, ಪದಾಧಿಕಾರಿಗಲು ಆಕೋಶ ವ್ಯಕ್ತಪಡಿಸಿ ಈ ಕೃತ್ಯವನ್ನು ಖಂಡಿಸಿದ್ದು ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಬೇಕು ಎಂದು ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ

ಈ ಎಲ್ಲಾ ಮನವಿಗಳನ್ನು ಒಟ್ಟು ಮಾಡಿ ಪೋಲೀಸರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ್ ಶೆಟ್ಟಿ ಮತ್ತು ಉಡುಪಿ ಬಂಟರ ಸಂಘದ ಉಪಾಧ್ಯಕ್ಷ ಮೋಹನ್ ಶೆಟ್ಟಿ ಮೂಡನಿಡಂಬೂರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು (ಜಿಲ್ಲಾ ಎಸ್ಪಿಯವರಿಗೆ ) ಸೆನ್ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಣಾ ಅಧಿಕಾರಿ ಅವರಿಗೆ ಈ ದೂರು ಸಲ್ಲಿಸಿದ್ದು ಕೇಸು ರಿಜಿಸ್ಟರ್ ಮಾಡಿದ್ದಾರೆ
ಗೌರವಾನ್ವಿತ ಎಸ್ಪಿ ಅವರು ಅದಕ್ಕೊಂದು ತಂಡ ರಚನೆ ಮಾಡಿ ತಪ್ಪಿತಸ್ಥರನ್ನು ಕೂಡಲೇ ಹುಡುಕುವಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುತ್ತಾರೆ ಹಾಗೂ ಪ್ರಮುಖ ಮಾಹಿತಿಗಳನ್ನು ಈಗಾಗಲೇ ಸಂಗ್ರಹಿಸಿರುತ್ತಾರೆ. ಶೀಘ್ರದಲ್ಲಿ ಇಂತಹ ಕೃತ್ಯವೆಸಗಿದವರು ಪತ್ತೆಯೂ ಆಗಲಿದ್ದಾರೆ ಪೊಲೀಸ್ ಇಲಾಖೆ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಬಂಟರನ್ನು ಒಗ್ಗೂಡಿಸಿ ಉಡುಪಿ ಮತ್ತು ಮುಂಬಯಿಯಲ್ಲಿ ವಿಶ್ವ ಮಟ್ಟದ ಬಂಟರ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಮಾತ್ರವಲ್ಲದೆ ಸೂರು ಇಲ್ಲದ ಬಡ ಸರ್ವ ಜಾತಿ ಬಾಂಧವರಿಗೆ ನೂರಕ್ಕೂ ಮಿಕ್ಕಿ ಮನೆ ನಿರ್ಮಿಸುವ ಯೋಜನೆಯ ಆಶ್ರಯದಾತರಾದ ಐಕಳ ಹರೀಶ್ ಶೆಟ್ಟಿಯವರ ಮನನೋಯಿಸುವ ಬಗ್ಗೆ ನಡೆಸುತ್ತಿರುವ ಈ ಕೃತ್ಯ ನಡೆಸಿದವರಿಗೆ ಕಾನೂನು ಮೂಲಕ ಸೂಕ್ತ ಕ್ರಮಗೈಗೊಳ್ಳುವಂತೆ ಬಂಟ ಸಮುದಾಯದ ಗಣ್ಯರು ವಿಶ್ವದಾದ್ಯಂತವಿರುವ ಬಂಟ ಸಮುದಾಯದ ಸಂಘಟನೆಗಳು ತೀವ್ರವಾಗಿ ಖಂಡಿಸಿದೆ

- Advertisement -
spot_img

Latest News

error: Content is protected !!