- Advertisement -
- Advertisement -
ನವದೆಹಲಿ : ಏಕಾಏಕಿ ವಿಶ್ವದ್ಯಾಂತ ಇನ್ಸ್ಟಾಗ್ರಾಂ, ಫೇಸ್ ಬುಕ್ ಸರ್ವರ್ ಡೌನ್ ಆಗಿದ್ದು ಬಳಕೆದಾರರು ಪರದಾಡುವಂತಾಗಿದೆ.
ಬಳಕೆದಾರರು ತಮ್ಮ ಫೇಸ್ಬುಕ್ ಖಾತೆಗಳಿಂದ ಲಾಗ್ ಔಟ್ ಆಗುವುದು, ಮತ್ತೆ ಲಾಗ್ ಇನ್ ಮಾಡುವುದು ಅಸಾಧ್ಯವಾಗುವಂತಹ ವಿವಿಧ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಅಂತೆಯೇ, ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ ಫೀಡ್ಗಳನ್ನ ರಿಫ್ರೆಶ್’ಗೊಳಿಸಲು ತೊಂದರೆಗಳನ್ನ ಎದುರಿಸುತ್ತಿದ್ದಾರೆ. ಕೆಲವು ವ್ಯಕ್ತಿಗಳಿಗೆ ಸ್ಟೋರಿ ಮತ್ತು ಕಾಮೆಂಟ್ಗಳು ಲೋಡ್ ಆಗಲು ವಿಫಲವಾಗಿವೆ. ಮೆಟಾ ಅಭಿವೃದ್ಧಿಪಡಿಸಿದ ಥ್ರೆಡ್ಸ್ ಎಂಬ ಅಪ್ಲಿಕೇಶನ್ ಸಹ ಸಂಪೂರ್ಣ ಸ್ಥಗಿತವನ್ನ ಅನುಭವಿಸುತ್ತಿದೆ. ಇನ್ನು ಮೆಟಾ ಇನ್ನೂ ಸಮಸ್ಯೆಯನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ.
- Advertisement -