Thursday, June 4, 2026
Homeಕರಾವಳಿಮಂಗಳೂರು ವಿವಿ ಕುಲಪತಿಯಾಗಿ ಪ್ರೊ. ಪಿ.ಎಲ್. ಧರ್ಮ ನೇಮಕ

ಮಂಗಳೂರು ವಿವಿ ಕುಲಪತಿಯಾಗಿ ಪ್ರೊ. ಪಿ.ಎಲ್. ಧರ್ಮ ನೇಮಕ

- Advertisement -
- Advertisement -

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ. ಪಿ.ಎಲ್. ಧರ್ಮ ನೇಮಕಗೊಂಡಿದ್ದಾರೆ.

ಪ್ರೊ. ಧರ್ಮ ಅವರನ್ನು ನೇಮಕಾತಿಗೊಳಿಸಿ ಇಂದು ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.

ಪ್ರೊ.‌ ಪಿ.ಎಲ್. ಧರ್ಮ ಇದುವರೆಗೂ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ಹಿಂದೆ ಕುಲಪತಿಯಾಗಿದ್ದ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರ ನಿವೃತ್ತಿಯ ಬಳಿಕ ಕಲಾ ನಿಕಾಯದ ಡೀನ್ ಆಗಿದ್ದ ಪ್ರೊ. ಜಯರಾಜ್ ಅಮೀನ್ ಅವರನ್ನು ಹಂಗಾಮಿ ಕುಲಪತಿಯಾಗಿ ನೇಮಿಸಲಾಗಿತ್ತು.

ಇದೀಗ ಪೂರ್ಣಾವಧಿಗೆ ಕುಲಪತಿಯಾಗಿ ಪ್ರೊ. ಧರ್ಮ ಅವರನ್ನು ನೇಮಕ ಮಾಡಲಾಗಿದ್ದು, ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕುಲಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

- Advertisement -

Latest News

error: Content is protected !!