Wednesday, June 24, 2026
Homeಅಪರಾಧಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸಿಕ್ಕ ಅಸ್ಥಿಪಂಜರಗಳೆಲ್ಲ ಪುರುಷರದ್ದು ಎಂದು ತಜ್ಞ ವೈದ್ಯರಿಂದ ದೃಢ

ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸಿಕ್ಕ ಅಸ್ಥಿಪಂಜರಗಳೆಲ್ಲ ಪುರುಷರದ್ದು ಎಂದು ತಜ್ಞ ವೈದ್ಯರಿಂದ ದೃಢ

- Advertisement -
- Advertisement -

ಬೆಳ್ತಂಗಡಿ : ಎರಡು ದಿನ ಎಸ್.ಐ.ಟಿ ಅಧಿಕಾರಿಗಳು ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಏಳು ತಲೆಬರುಡೆ ಸಹಿತ ಅಸ್ಥಿಪಂಜರಗಳನ್ನು ಪುರುಷರದ್ದು ಎಂದು ತಜ್ಞ ವೈದ್ಯರ ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ.17 ರಂದು ಐದು ತಲೆಬರುಡೆ ಸಹಿತ ಅಸ್ಥಿಪಂಜರಗಳನ್ನು ಮಹಜರು ನಡೆಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಮತ್ತು ಸೆ.18 ರಂದು ಕೂಡ ಎರಡು ತಲೆಬರುಡೆ ಸಹಿತ ಅಸ್ಥಿಪಂಜರಗಳನ್ನು ಮಹಜರು ನಡೆಸಿದ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ‌.

ಪ್ರಾಥಮಿಕ ತನಿಖೆ ಮಾಡಿದ ತಜ್ಞ ವೈದ್ಯರು ಏಳು ಅಸ್ಥಿಪಂಜರಗಳು ಕೂಡ ಪುರಷರದ್ದು ಎಂದು ದೃಢಪಡಿಸಿದ್ದಾರೆ.

- Advertisement -

Latest News

error: Content is protected !!