Thursday, June 25, 2026
HomeUncategorizedಇನ್ಸ್ಟಾಗ್ರಾಮ್ ನಲ್ಲಿ ಪ್ರಚೋದನಕಾರಿ ಪೋಸ್ಟ್; ಸೆನ್ ಪೊಲೀಸರಿಂದ ಬೆಳ್ತಂಗಡಿಯ ಯುವಕ ತಮಿಳುನಾಡಿನಲ್ಲಿ ಬಂಧನ

ಇನ್ಸ್ಟಾಗ್ರಾಮ್ ನಲ್ಲಿ ಪ್ರಚೋದನಕಾರಿ ಪೋಸ್ಟ್; ಸೆನ್ ಪೊಲೀಸರಿಂದ ಬೆಳ್ತಂಗಡಿಯ ಯುವಕ ತಮಿಳುನಾಡಿನಲ್ಲಿ ಬಂಧನ

- Advertisement -
- Advertisement -

ಮಂಗಳೂರು: ಮಂಗಳೂರು ನಗರ CEN ಅಪರಾಧ ಪೊಲೀಸ್ ಠಾಣೆಯಲ್ಲಿ ಜುಲೈ 19 ರಂದು ಕರಾವಳಿ_ಟೈಗರ್ಸ್ ನ ಇನ್ಸ್ಟಾಗ್ರಾಮ್ ಪುಟದ ಪ್ರಚೋದನಕಾರಿ ಸಂದೇಶ ಪೋಸ್ಟ್ ಹಾಕಿದ ವಿರುದ್ಧ ಕಲಂ. 66(ಸಿ) ಐಟಿ ಕಾಯ್ದೆ ಹಾಗೂ ಕಲಂ. 56, 353(1), 192 ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದ ಆರೋಪಿಯು ಕರಾವಳಿ_ಟೈಗರ್ಸ್ ಹೆಸರಿನ ಇನ್ಸ್ಟಾಗ್ರಾಮ್ ಪುಟದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದ. ತಾಂತ್ರಿಕ ಪುರಾವೆಗಳ ಮೂಲಕ ಕಾರ್ಯಾಚರಣೆ ನಡೆಸಿ ಆರೋಪಿ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಿಲ್ಲೂರು ನಿವಾಸಿ ಶರೀಫ್ ಮಗ ಮೊಹಮ್ಮದ್ ಕೈಫ್(22) ಎಂಬಾತನನ್ನು ತಮಿಳುನಾಡಿನಲ್ಲಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ತಮಿಳುನಾಡು ರಾಜ್ಯಕ್ಕೆ ತೆರಳಿ ಸೆ.18 ರಂದು ಬಂಧಿಸಿ ಮಾನ್ಯ ಮಂಗಳೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಕರಾವಳಿ_ಟೈಗರ್ಸ್ ವಿರುದ್ಧ ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!