Saturday, May 4, 2024
Homeಇತರಕರಾವಳಿ ಭಾಗಕ್ಕೆ ಮರಳು ನೀತಿಯಲ್ಲಿ ವಿನಾಯಿತಿ: ಶಾಸಕ ಡಾ| ಭರತ್‌ ಶೆಟ್ಟಿ ಮನವಿ

ಕರಾವಳಿ ಭಾಗಕ್ಕೆ ಮರಳು ನೀತಿಯಲ್ಲಿ ವಿನಾಯಿತಿ: ಶಾಸಕ ಡಾ| ಭರತ್‌ ಶೆಟ್ಟಿ ಮನವಿ

spot_img
- Advertisement -
- Advertisement -

ಮಂಗಳೂರು :ಕರಾವಳಿ ಭಾಗಕ್ಕೆ ಮರಳು ನೀತಿಯಲ್ಲಿ ಕೆಲವು ವಿನಾಯಿತಿ ಅಗತ್ಯವಿದ್ದು, ಕೆಂಪು ಕಲ್ಲು ಬಳಕೆಗೆ ವಿಧಿಸುತ್ತಿರುವ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಬಿಜೆಪಿಯ ಶಾಸಕ ಡಾ| ಭರತ್‌ ಶೆಟ್ಟಿ ಮನವಿ ಮಾಡಿದರು.

ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, ಕರಾವಳಿ ಭಾಗದಲ್ಲಿ ಎರಡು ಜಲಾಶಯಗಳಿದ್ದು, ಹೂಳು ತೆಗೆದು ಮರಳು ಪಡೆಯಲು ಅನುಮತಿ ನೀಡಲಾಗಿದೆ. ಆದರೆ ಡ್ರಿಜ್ಜಿಂಗ್‌ ಯಂತ್ರ ಬಳಕೆಯಿಂದ ತೀವ್ರ ತೊಂದರೆಯಾಗುತ್ತಿದ್ದು, ಈ ಯಂತ್ರ ಬಳಸದಂತೆ ಸೂಚಿಸಬೇಕು.

ಗಣಿ ಸಚಿವ ಹಾಲಪ್ಪ ಆಚಾರ್‌ ಉತ್ತರಿಸಿ. ಹೊಸ ಮರಳು ನೀತಿ- 2020, ಮರಳು ಗಣಿಗಾರಿಕೆ ಸಂಬಂಧ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತರಲು ಕರಡು ನಿಯಮ ಸಚಿವ ಸಂಪುಟ ಸಭೆ ಮುಂದೆ ಮಂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಕರಾವಳಿ ಜಿಲ್ಲೆಗಳಲ್ಲಿ ನೂತನ ಕಲ್ಲು ನೀತಿ ಜಾರಿಗೊಳಿಸುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ. ಹೊಸ ಮರಳು ನೀತಿ ಸಂಬಂಧ ಒಂದೂವರೆ ತಿಂಗಳಲ್ಲಿ ಎಲ್ಲ ವಿಚಾರಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.

- Advertisement -
spot_img

Latest News

error: Content is protected !!