Friday, May 17, 2024
HomeUncategorizedಇಂಡಿಯಾ ಟುಡೇ ರಾಂಕಿಂಗ್: ಉಜಿರೆ ಎಸ್‌ಡಿಎಂ ಕಾಲೇಜಿಗೆ ಉತ್ಕೃಷ್ಟ ಮಾನ್ಯತೆ

ಇಂಡಿಯಾ ಟುಡೇ ರಾಂಕಿಂಗ್: ಉಜಿರೆ ಎಸ್‌ಡಿಎಂ ಕಾಲೇಜಿಗೆ ಉತ್ಕೃಷ್ಟ ಮಾನ್ಯತೆ

spot_img
- Advertisement -
- Advertisement -

ಉಜಿರೆ: ಆಂಗ್ಲ ವಾರಪತ್ರಿಕೆಯಾದ ‘ಇಂಡಿಯಾ ಟುಡೆ’ ಇತ್ತೀಚೆಗೆ ನಡೆಸಿದ ಅತ್ಯುತ್ತಮ ಕಾಲೇಜುಗಳ ಆಯ್ಕೆ ಸಮೀಕ್ಷೆಯಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ಹಲವು ವಿಭಾಗಗಳು ಅತ್ಯುತ್ತಮ ರಾಂಕಿಂಗ್ ಅನ್ನು ಪಡೆದುಕೊಂಡಿವೆ.

ಗುಣಾತ್ಮಕ ಶಿಕ್ಷ ಣದ ಮೂಲಕ ಗುರುತಿಸಿಕೊಂಡಿರುವ ಉಜಿರೆ ಎಸ್‌ಡಿಎಂ ಕಾಲೇಜಿಗೆ ಇದೀಗ ದೇಶವ್ಯಾಪಿ ವಿಶೇಷ ಮನ್ನಣೆ ದೊರೆತಂತಾಗಿದೆ. ರಾಷ್ಟ್ರದ ಪದವಿ ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿನ ವಿವಿಧ ಕೋರ್ಸ್‍ಗಳ ನಿರ್ವಹಣೆ ಮತ್ತು ಸಾಧನೆಯನ್ನು ಮೌಲ್ಯಮಾಪನ ಮಾಡಲು ‘ಇಂಡಿಯಾ ಟುಡೇ’ ನಿಯತಕಾಲಿಕವು ಈ ಸಮೀಕ್ಷೆಯನ್ನು ನಡೆಸಿತ್ತು. ಜುಲೈ 05, 2021ರ ವಿಶೇಷ ಸಂಚಿಕೆಯಲ್ಲಿ ಈ ಕುರಿತ ಸಮಗ್ರ ಮಾಹಿತಿಯನ್ನು ಪತ್ರಿಕೆ ಪ್ರಕಟಿಸಿದೆ.

ಇಂಡಿಯಾ ಟುಡೇ ಸಂಚಿಕೆಯಲ್ಲಿ ನೀಡಲಾದ ವಿವರಗಳಲ್ಲಿ ಉಜಿರೆ ಎಸ್ ಡಿ ಎಂ ಕಾಲೇಜಿನ ಬಿಸಿಎ ವಿಭಾಗವು 25ನೇ ರ‍್ಯಾಂಕ್‌, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು 25ನೇ ಶ್ರೇಯಾಂಕ, ಸಮಾಜಕಾರ್ಯ ವಿಭಾಗವು 26ನೇ ರ‍್ಯಾಂಕ್‌, ಬಿಬಿಎ ವಿಭಾಗವು 42ನೇ ರ‍್ಯಾಂಕ್‌, ಕಲಾ ವಿಭಾಗವು 62ನೇ ರ‍್ಯಾಂಕ್‌, ವಿಜ್ಞಾನ ವಿಭಾಗವು 66ನೇ ರ‍್ಯಾಂಕ್‌ ಮತ್ತು ವಾಣಿಜ್ಯಶಾಸ್ತ್ರ ವಿಭಾಗವು 87ನೇ ಶ್ರೇಯಾಂಕದೊಂದಿಗೆ ‘ಟಾಪ್ ಹಂಡ್ರೆಡ್’ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಕಾಲೇಜಿನ ಬಿಸಿಎ ವಿಭಾಗವು ಅತ್ಯಂತ ಕಡಿಮೆ ಶುಲ್ಕ ನಿಗದಿಗೊಳಿಸಿದ ಕಾಲೇಜುಗಳ ಪಟ್ಟಿಯಲ್ಲಿ 09ನೇ ರ‍್ಯಾಂಕ್‌ ಪಡೆದಿದೆ. ಕಳೆದ ಬಾರಿಯು ಇದೇ ಸಮೀಕ್ಷೆಯಲ್ಲಿ ಉಜಿರೆ ಕಾಲೇಜಿಗೆ ಎಲ್ಲಾ ವಿಭಾಗಗಳಲ್ಲೂ ಪ್ರತಿಷ್ಠಿತ 100 ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಲಭಿಸಿತ್ತು.

- Advertisement -
spot_img

Latest News

error: Content is protected !!