Friday, August 28, 2026
Homeಕರಾವಳಿಉಡುಪಿಗೋಕರ್ಣದಲ್ಲಿ ಮಾಜಿ ಪ್ರೇಯಸಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವ ಅರೆಸ್ಟ್

ಗೋಕರ್ಣದಲ್ಲಿ ಮಾಜಿ ಪ್ರೇಯಸಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವ ಅರೆಸ್ಟ್

- Advertisement -
- Advertisement -

ಕಾರವಾರ : ತನ್ನನ್ನು ಬಿಟ್ಟು ಹೋಗಿದ್ದ ಪ್ರೇಯಸಿಯ ಬಗ್ಗೆ ಕೋಪಗೊಂಡ ಪ್ರೇಮಿಯೊಬ್ಬ ಆಕೆಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ. ಕಳೆದೆರಡು ವರ್ಷಗಳಿಂದ ತನ್ನ ಬಿಟ್ಟು ಹೋಗಿದ್ದ ಪ್ರೇಯಸಿಯ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ನೋಡಿ ಆಕೆಯಿರುವ ಸ್ಥಳ ಪತ್ತೆ ಹಚ್ಚಿ ಬಂದು ಆಕೆಯ ಮೇಲೆ ಈ ದುಷ್ಕೃತ್ಯ ಎಸಗಿದ್ದಾನೆ. ಈ ಘಟನೆ ಬಳಿಕ ವೇಷ ಮರೆಸಿಕೊಂಡು ಪುಣೆಯಲ್ಲಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜುಲೈ 7 ರಂದು ಬೆಂಗಳೂರಿನಿಂದ ಗೋಕರ್ಣದ ಕುಡ್ಲೆ ಬೀಚ್ ಗೆ ಸ್ನೇಹಿತರ ಜೊತೆ ಬಂದಿದ್ದ ಹರಿಯಾಣ ಮೂಲದ ಪ್ರವಾಸಿ ಯುವತಿ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ್ದ. ಈ ಘಟನೆ ಕುರಿತು ಪ್ರಕರಣ ದಾಖಲಿಸಿದ ಯುವತಿ, ಇದು ತನ್ನ ಮಾಜಿ ಪ್ರಿಯಕರನಿಂದ ಆದ ಕೃತ್ಯ ಎಂದು ಎಫ್​ಐಆರ್​ ದಾಖಲಿಸಿದ್ದಳು. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಆರೋಪಿಯ ಮೊಬೈಲ್ ನಂಬರ್ ಜಾಡು ಹಿಡಿದು ಮತ್ತು ಹಲ್ಲೆಗೊಳಗಾದ ಮಹಿಳೆಯ ಕೆಲ ಮಾಹಿತಿ ಆಧರಿಸಿ ತನಿಖೆ ಕೈಗೊಂಡರು. ಈ ವೇಳೆ ಆತ ಮಹಾರಾಷ್ಟ್ರದ ಪುಣೆ ಗೆ ಈತ ಉದ್ಯೋಗ ಮಾಡುತ್ತಿದ್ದು ತಿಳಿದು ಬಂದಿದ್ದು ಬಂಧಿಸಲಾಗಿದೆ. ಬಂಧಿತನನ್ನು ಪುಣೆಯ ಮೂಲದ ತುಷಾರ್ ಮರಾಠೆ ಎನ್ನಲಾಗಿದೆ.

- Advertisement -

Latest News

error: Content is protected !!